ಸುದ್ದಿ ಕನ್ನಡ ವಾರ್ತೆ

ತಾಲೂಕಿನ ಪ್ರಮುಖ ಕೇಂದ್ರ ರಾಮನಗರದಲ್ಲಿ ಜಗದ್ಗುರು ನರೇಂದ್ರ ಮಹಾರಾಜರ ಪಾದುಕಾ ದರ್ಶನ ಕಾರ್ಯಕ್ರಮ ವನ್ನು ನಾಳೆ ದಿನಾಂಕ 20 ರ ಮಂಗಳವಾರ ಹಮ್ಮಿಕೊಳ್ಳ ಲಾಗಿದೆ. ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ ದಕ್ಷಿಣ ಪೀಠ ನಾಣಿಜ್ ರವರ ಪಾದುಕಾ ದರ್ಶನಕ್ಕೆ ತಾಲೂಕಿನ ಭಕ್ತರು ಕಾಯುತ್ತಿದ್ದಾರೆ. ಮಂಗಳವಾರ ದಿನ ಬೆಳಿಗ್ಗೆ 10 ಘಂಟೆಗೆ ರಾಮನಗರ ಕ್ಕೆ ಶ್ರೀ ಗಳ ಪಾದುಕೆ ಬರಲಿದೆ, ಈ ಬಗ್ಗೆ ಕಾರ್ಯಕರ್ತರು ಬಿರುಸಿನ ಸಿದ್ಧತೆ ಮಾಡಿದ್ದಾರೆ.

ನಾಳೆ ಬೆಳಿಗ್ಗೆ ಪಾದುಕೆ ಆಗಮನದ ನಂತರ ಸಾಮಾಜಿಕ ಉಪಕ್ರಮ, ಗುರುಪೂಜೆ, ಆರತಿ ಸಮಾರಂಭ,ಪ್ರವಚನ, ಉಪಾಸಕ ದೀಕ್ಷಾ, ದರ್ಶನ, ಪುಷ್ಪ ವೃಷ್ಟಿ, ಕಾರ್ಯಕ್ರಮ ಗಳು ನಡೆಯುತ್ತವೆ. ಜನರು ತಮ್ಮ ಸಹ ಕುಟುಂಬ, ಪಾರಿವಾರದ ಸಮೇತ ಬಂದು ಪಾದುಕೆ ಮತ್ತು ಗುರುಪೂಜನ ಕಾರ್ಯಕ್ರಮ ಕ್ಕೆ ಸಾಕ್ಷಿ ಯಾಗ ಬೇಕೆಂದು ಸಂಘಟಕರು ವಿನಂತಿಸಿದ್ದಾರೆ. ಕಾರ್ಯಕ್ರಮ ದ ಸಿದ್ಧತೆ ರಾಮನಗರದ ಶ್ರೀ ರಾಮಲಿಂಗ ದೇವಸ್ಥಾನ ದ ಆವಾರದಲ್ಲಿ ಮಾಡಲಾಗಿದೆ ಸುಮಾರು ಐದು ಸಾವಿರ ಜನರು ಬರುವ ನಿರೀಕ್ಷೆ. ಇದೆ ಅದಕ್ಕಾಗಿ ಸಕಲ ದಿದ್ದತೆ ಗಳು ಮುಗಿದಿವೆ ಎಂದು ಸಂಘಟನೆ ಯಲ್ಲಿರುವ ಸಂದೀಪ ನಗರಿ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮ ಶಾಂತಿಯುತ ವಾಗಿ ನಡೆಯಲು ಎಲ್ಲರ ಸಹಕಾರ ಬಯಸಿದ್ದಾರೆ.