ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕನ್ನು ಸಾವಯವ ಕೃಷಿ ತಾಲೂಕನ್ನಾಗಿ ಘೋಷಿಸುತ್ತಿರುವ ಸಂದರ್ಭ ದಲ್ಲಿ ರೈತರಿಗೆ ಸಾವಯವ ಜ್ಞಾನ ಕೊಡುವ ಮೂಲಕ ತಾಲೂಕು ಪೂರ್ತಿಯಾಗಿ ಸಾವಯವ ಕೃಷಿಯಲ್ಲಿ ತೊಡಗಿಸಿ ಕೊಳ್ಳಲು ರೈತರು ಸಿದ್ದರಾಗಲಿ ಎಂಬ ಉದ್ದೇಶದಿಂದ ಒಂದು ದಿನದ ರೈತರ ಕೃಷಿ ಪ್ರವಾಸವನ್ನು ತಾಲೂಕಿನ ಕೃಷಿ ಇಲಾಖೆ, ಸ್ಕೊಡ ವೆಸ್ ಶಿರಸಿ ಇವರು ಹಮ್ಮಿಕೊಂಡಿದ್ದರು.

ಎರಡು ಬಸ್ಸಿನಲ್ಲಿ ಮೊದಲು ರೈತರನ್ನು ಜೈವಿಕ ಕೇಂದ್ರ ಬೆಳಗಾವಿಗೆ ಕರೆದುಕೊಂಡು ಹೋಗಲಾಯಿತು ಅಲ್ಲಿಯ ಅಧಿಕಾರಿಗಳಾದ, ಸಿದ್ದಪ್ಪ ಶಂಕರ ಗೊಂಡ (AHO )ಶ್ರೀಮತಿ ಸುಮನಾoಜಲಿ(AHO) ಮತ್ತು ಶ್ರೀಮತಿ ವಿಜಯಲಕ್ಷ್ಮಿ( AHO) ಇವರು ಗಳು ಜೈವಿಕ ಗೊಬ್ಬರ ತಯಾರಿಕೆ, ಬಳಕೆ ಬಗ್ಗೆ, ಅಂಗಾಂಗ ಕೃಷಿ ಬಾಳೆ ಬಗ್ಗೆ, ಮತ್ತು ಸಾವಯವ ಕೃಷಿ ಯಲ್ಲಿ ಮಣ್ಣು, ನೀರು, ಪರೀಕ್ಷೆ ಯ ಉದ್ದೇಶ, ರಾಸಾಯನಿಕ ಗೊಬ್ಬರ ಅತಿಯಾದ ಬಳಕೆ ಯಿಂದ ಆಗುವ ದುಷ್ಪರಿಣಾಮ ಗಳ ಮಾಹಿತಿ ಸೇರಿದಂತೆ ಅನೇಕ ವಿಷಯ ಗಳನ್ನು ತಿಳಿಸುತ್ತಾ,ರೈತರ ಪ್ರಶ್ನೆ ಗಳಿಗೆ ಉತ್ತರಿಸಿದರು.

ಮದ್ಯಾಹ್ನ ಖಾನಾಪುರ ತಾಲೂಕಿನ ಶೇಡೆ ಗಾಳಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಕೃಷಿ ಸಸ್ಯ ಪಾಲನಾ ಕೇಂದ್ರ ದಲ್ಲಿ ನ ಕಾರ್ಯ ವೈಖರಿ ಯನ್ನು ಅವಲೋಕಿಸಲಾಯಿತು. ಶೇಡೇಗಾಳಿ ಫಾರ್ಮ್ 30 ಎಕರೆ ವಿಸ್ತೀರ್ಣ ಹೊಂದಿದ್ದು, ವಿವಿಧ ಜಾತಿಯ 40 ಹಣ್ಣಿನ ತಳಿಗಳು ಮತ್ತು ಮಾವಿನಲ್ಲೇ. 40 ಜಾತಿಯ ಮಾವಿನ ತಳಿಯನ್ನುಹೊಂದಿದೆ. ದೇಶ ವಿದೇಶ ಗಳ ಹಲವಾರು ಆರೋಗ್ಯ ವರ್ಧಕ ತಳಿಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ, ಇಲ್ಲಿನ. ಸಹಾಯಕ ಕೃಷಿ ನಿರ್ದೇಶಕರು ರಾಜಕುಮಾರ ಅವರು ಸಿಬ್ಬಂದಿ ಗಳ ಕೊರತೆಯಲ್ಲೂ ಉತ್ತಮ ಕಾರ್ಯ ಮಾಡುತ್ತಾ, ಮಾಹಿತಿ ನೀಡಿದರು ರೈತರಿಗೆ ಈ. ಕೃಷಿ ಪ್ರವಾಸದಿಂದ ತಮ್ಮ ಕೃಷಿಯಲ್ಲಿ ಆಗಬೇಕಾದ ಬದಲಾವಣೆ ಮಾಡಿಕೊಳ್ಳಲು ಉತ್ತಮ ಅವಕಾಶ ಆದಂತಾಗಿದೆ.

ಸ್ಕೊಡ್ ವೇಸ್ ಪರವಾಗಿ ವಿನಾಯಕ ಪೈ, ಅಮರ ಭಾಗ್ವತ, ಭಾಸ್ಕರ ಗುಂದ,ಸುಭಾಷ ಇತರರು ಸಹಕಾರ ನೀಡಿದರು