ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ನಗರಬಾವಿಯಲ್ಲಿ ಸತತ 32 ನೇ ವರ್ಷದ ಶ್ರೀ ರಾಮಲಿಂಗ NSS ಕ್ರಿಕೆಟ್ ಕ್ಲಬ್ ಹಾಗೂ ಸಮಸ್ತ ಊರ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ದಿನಾಂಕ :14/01/2026 ರ ಬುಧವಾರದಿಂದ ಆಹ್ವಾನಿತ ತಂಡಗಳ ಗ್ರಾಮೀಣ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಗರಬಾವಿಯ ಕ್ರೀಡಾಂಗಣದಲ್ಲಿ ನಡೆಯಿತು. ಕ್ರೀಡಾಕೂಟದ ಅಂತಿಮ ದಿನದ ಪೈನಲ್ ಪಂದ್ಯದಲ್ಲಿ ಜೋಯಿಡಾದ ಜೈ ಮಲ್ಹಾರ್ ತಂಡವು ಅತಿಥೇಯ ನಗರಬಾವಿ NSS ಬಾಯ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.ನಗರಬಾವಿಯ NSS ತಂಡವು ದ್ವಿತೀಯ(ರನ್ನರ್ ಅಪ್) ಸ್ಥಾನ ಪಡೆಯಿತು.
ಸಮಾರೋಪ ಹಾಗೂ ಬಹುಮಾನ ವಿತರಣೆಯ ಸಂದರ್ಭದಲ್ಲಿ ದಯಾನಂದ ಮಿರಾಶಿ ಊರಿನ ಪ್ರಮುಖರು,ಜೋಯಿಡಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಚಂದ್ರಿಮಾ ಮಿರಾಶಿ, ಉಪಾಧ್ಯಕ್ಷರಾದ ಸಂತೋಷ ಮಂತೆರೋ, ಪಾಂಡುರಂಗ ಗಾವಡಾ, ದಿವಾಕರ ಕುಂಡಲಕರ,ನಾರಾಯಣ, ಇನ್ನುಳಿದ ಗಣ್ಯರು,ಊರ ಪ್ರಮುಖರು ಉಪಸ್ಥಿತರಿದ್ದರು. ಗಣ್ಯರು ಕ್ರೀಡಾಕೂಟ ಯಶಸ್ವಿಯಾಗಿ ಸಂಘಟಿಸಿದ್ದಕ್ಕೆ ಸಂಘಟಕರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಆಕರ್ಷಕ ಪ್ರಥಮ ಹಾಗೂ ದ್ವಿತೀಯ, ತೃತೀಯ ಇನ್ನುಳಿದ ಬಹುಮಾನಗಳನ್ನು ವಿತರಿಸಿದರು.ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾ ಆಟಗಾರರಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ಸಂಘಟಕರಿಂದ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಸಂಘಟಕರು ಉತ್ತಮವಾಗಿ ಮಾಡಿದ್ದರು.ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಲ್ಲಾ ತಂಡಗಳು ಕ್ರೀಡಾಮನೋಭಾವದಿಂದ ಆಟವಾಡಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.
