ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ನಂದಿಗದ್ದೆ ಗ್ರಾಮ ಪಂಚಾಯತ ಕಾರ್ಯಾಲಯದ ಸಭಾಭವನದಲ್ಲಿ ಜಿಲ್ಲಾ ಪಂಚಾಯತ ಉತ್ತರಕನ್ನಡ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉತ್ತರಕನ್ನಡ,ಮತ್ತು ಗ್ರಾಮ ಪಂಚಾಯತ ನಂದಿಗದ್ದೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಕಲಚೇತನರ ಪೋಷಕರಿಗೆ ಅರಿವಿನ ಸಭೆ,ವಿಶೇಷ ಸಮನ್ವಯ ಗ್ರಾಮ ಸಭೆ ಶನಿವಾರ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ನಂದಿಗದ್ದೆ ಗ್ರಾಮ ಪಂಚಾಯತದ ವಿ ಆರ್ ಡಬ್ಲ್ಯು ಮಂಜುನಾಥ ಮಿರಾಶಿಯವರು ವಿಕಲಚೇತನ ಬಂಧುಗಳಿಗೆ ಸರ್ಕಾರದಿಂದ ಸಿಗುವ ವಿವಿಧ ಯೋಜನೆಗಳ ಮಾಹಿತಿ, ಯೋಜನೆಗಳ ತಕ್ಕಂತೆ ದಾಖಲೆಗಳು, ಸಮರ್ಪಕ ದಾಖಲೆ ಪತ್ರಗಳು,ವಾಸಸ್ಥಳ ಪ್ರಮಾಣಪತ್ರ ,ಆದಾಯ ಪ್ರಮಾಣಪತ್ರ ಇವುಗಳ ಮಾಹಿತಿ,ವಿವಿಧ ಸಂಸ್ಥೆಗಳಿಂದ ವಿಕಲಚೇತನರ ಪಲಾನುಭವಿ ಬಂಧುಗಳಿಗೆ ವಿದ್ಯಾರ್ಥಿ ವೇತನ,ಸಾಮಗ್ರಿಗಳು,ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ,ಗ್ರಾಮ ಪಂಚಾಯತ ವತಿಯಿಂದ ನೀಡಲಾದ ಸೌಲಭ್ಯಗಳ ವಿವರವಾದ ಮಾಹಿತಿಯನ್ನು ನೀಡಿದರು.ನಂತರ ತಾಲೂಕು ಪಂಚಾಯತ ವತಿಯಿಂದ ವಿಕಲಚೇತನ ಬಂಧುಗಳಿಗೆ ನೀಡಲಾಗುವ ಸೌಲಭ್ಯದ ಪಲಾನುಭವಿಗಳ ಬೇಡಿಕೆಯನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಲಾನುಭವಿಗೆ ಶ್ರವಣ ಸಾಧನವನ್ನು ನಂದಿಗದ್ದೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ದೇಸಾಯಿ, ಉಪಾಧ್ಯಕ್ಷರಾದ ದಾಕ್ಷಾಯಣಿ ದಾನಶೂರ,ಸದಸ್ಯರಾದ ಧವಳೋ ಗಣೇಶ ಸಾವರ್ಕರ್, ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ದತ್ತಾತ್ರೇಯ, ನಂದಿಗದ್ದೆ ಗ್ರಾಮ ಪಂಚಾಯತದ ವಿ ಆರ್ ಡಬ್ಲ್ಯು ಮಂಜುನಾಥ ಮಿರಾಶಿ ವಿತರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಗಜಾನನ ಸಾವರಕರ,ಗ್ರಾಮ ಪಂಚಾಯತ ಸಿಬ್ಬಂದಿಗಳು, ವಿಕಲಚೇತನ ಬಂಧುಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಧನ್ಯವಾದ ಸಲ್ಲಿಸಲಾಯಿತು.
