ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರು ಅತಿಥಿ ಕಲಾವಿದರನ್ನು ಒಳಗೊಂಡು ಅಮೋಘ ಪೌರಾಣಿಕ ಯಕ್ಷಗಾನ ಪ್ರದರ್ಶನ ವನ್ನು ನಂದಿಗದ್ದೆ (ಗುಂದ) ಯಲ್ಲಿ. ಇದೇ ತಿಂಗಳ ದಿನಾಂಕ 21 ರ ಬುಧವಾರ ರಾತ್ರಿ ಸರಿಯಾಗಿ 9.30 ರಿಂದ ಆಡಿತೋರಿಸಲಿದ್ದಾರೆ. ವಾಲಿ ಮೋಕ್ಷ, ನರಕಾಸುರ, ಮತ್ತು ಮೈಂದ-ದ್ವಿವಿದ ಎಂಬ ಮೂರು ಯಕ್ಷಗಾನ ಪ್ರಸಂಗ ಗಳನ್ನು ಆಡಿ ತೋರಿಸಲಿದ್ದಾರೆ.

ಜನಪ್ರಿಯ ಭಾಗವತರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಸಾರಥ್ಯ ದಲ್ಲಿ, ಅತಿಥಿ ಕಲಾವಿದರಾದ ವಿದ್ಯಾಧರ ಜಲವಳ್ಳಿ, ಪ್ರಕಾಶ ಮೊಗವೀರ ಕಿರಾಡಿ ಮತ್ತು ಪೆರ್ಡೂರ ಮೇಳದ ಜನಪ್ರಿಯ ಎಲ್ಲ ಕಲಾವಿದರು ಕೂಡುವಿಕೆಯಲ್ಲಿ ಜನರಂಜನೆ ಮನರಂಜನೆ ನಡೆಯಲಿದೆ. ಕೆ ಕರುಣಾಕರ ಶೆಟ್ಟಿ ಮತ್ತು ಸುಬ್ರಮಣ್ಯ ಶಾಸ್ತ್ರಿ ಇವರ ಮುಂದಾಳತ್ವದ ಅನಂತ ಪದ್ಮನಾಭ ಯಕ್ಷಗಾನ ಮೇಳದ ಈ ಸುಂದರ ಕಲಾ ಕಾಣಿಕೆ ಯನ್ನು ಜನರು ತಮ್ಮ ಊರಿನಲ್ಲಿಯೇ ನೋಡಿ ಆನಂದಿಸಲಿ ಎಂದು ಯಕ್ಷ ದರ್ಶನ ಗುಂದ ಇವರು ಸಾಕಷ್ಟು ಪ್ರಯತ್ನಿಸಿದ್ದಾರೆ. ಸ್ಥಳ ಕಾಯ್ದಿರಿಸಲು 9480083290 ಮತ್ತು 9448817954 ಈ ನಂಬರ ಗಳಿಗೆ ಕರೆ ಮಾಡಿದರೆ ಅವಕಾಶ ಪಡೆಯ ಬಹುದು.