ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಬಿ ಜಿ ವಿ ಎಸ್ ಜೋಯಿಡಾ ಕಾಲೇಜಿನ ವಿದ್ಯಾರ್ಥಿನಿ ಆದಿತಿ ಮಧುಕರ ಗಾವಡಾ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಕರ್ನಾಟಕ ಅರಣ್ಯ ಇಲಾಖೆ,ಕೆನರಾ ವೃತ್ತ ಶಿರಸಿ ಇದರ ಹಳಿಯಾಳ ವಿಭಾಗದ ಆಶ್ರಯದಡಿ ಶುಕ್ರವಾರ ದಾಂಡೇಲಿ ನಗರದ ಹಾರ್ನಬಿಲ್ ಸಭಾಭವನದಲ್ಲಿ ನಡೆದ ಹಾರ್ನಬಿಲ್ ಹಕ್ಕಿ ಹಬ್ಬ-,2026 ರ ಪ್ರಯುಕ್ತ ದಿನಾಂಕ:16 ಜನವರಿ 2026 ರಂದು ಜರುಗಿದ ಪ್ರಬಂಧ ಸ್ಪರ್ಧೆಯಲ್ಲಿ ಜೋಯಿಡಾ ತಾಲೂಕಿನ ಬಿ ಜಿ ವಿ ಎಸ್ ಜೋಯಿಡಾ ಕಾಲೇಜಿನಿಂದ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರಿರುತ್ತಾರೆ.ಇವರಿಗೆ ಅರಣ್ಯ ಇಲಾಖೆಯವರು,ಕಾಲೇಜಿನ ಪ್ರಾಂಶುಪಾಲರು,ಉಪನ್ಯಾಸಕ ವೃಂದದವರು,ಕುಟುಂಬ ವರ್ಗದವರು,ಹಿತೈಷಿಗಳು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.
