ಸುದ್ದಿ ಕನ್ನಡ ವಾರ್ತೆ
ಜೋಯಿಡಾ: ಮೊದಲಿಗೆ ಇದು
ನಕಲಿ ಎಂದುಕೊಂಡೆ. ಆದರೆ ಐವತ್ತು ಸಾವಿರ ರುಪಾಯಿ ದೊರೆಯಿತು. ನೀವೂ ಪ್ರಯತ್ನಿಸಿ ನೋಡಿ ಎಂಬ ಹಣದ ಆಶೆಯೊಂದಿಗೆ ನಂಬಿಕೆ ಮೂಡಿಸುವ ಸುಳ್ಳು ಸಂದೇಶವೊಂದು ಬಹುತೇಕ ಎಲ್ಲರ ವಾಟ್ಸಾಫ್ ಗ್ರೂಪ್ಗಳಲ್ಲಿ ವಿನಿಮಯಗೊಳ್ಳತೊಡಗಿದ್ದು ಡಿಜಿಟಲ್ ವಂಚನೆಯ ಜಾಲಕ್ಕೆ ತುತ್ತಾಗುವ ಮುನ್ನ ಜಾಗರೂಕರಾಗಬೇಕಿದೆ.
ಸೈಬರ್ ಅಪರಾಧ ತಜ್ಞರು ಹಾಗೂ ಗ್ರಾಹಕ ಸಂರಕ್ಷಣಾ ಸಂಘಗಳು ನಡೆಸಿದ ಅಧ್ಯಯನದಂತೆ, ಇಂತಹ ಸಂದೇಶಗಳು ಸಾಮಾನ್ಯವಾಗಿ ನಕಲಿ ಲಿಂಕ್, ನಕಲಿ ವೆಬ್ಸೈಟ್ಗಳು, ನಕಲಿ ಆ್ಯಪ್ಗಳ ಮೂಲಕ ಜನರನ್ನು ಆಕರ್ಷಿಸುತ್ತವೆ. ಮೊದಲ ಹಂತದಲ್ಲಿ ಸಣ್ಣ ಮೊತ್ತ ಹಾಗೂ ನಂಬಿಕೆ ಮೂಡುವ ರೀತಿಯ ಪ್ರತಿಕ್ರಿಯೆ ತೋರಿಸಿ ನಂತರ ಬ್ಯಾಂಕ್ ವಿವರ, ಒಟಿಪಿ, ಪಾನ್ ಸಂಖ್ಯೆ ಅಥವಾ ಆಧಾರ ಮಾಹಿತಿಯನ್ನು ಪಡೆದು ಹಣ ವಂಚಿಸಲಾಗುತ್ತದೆ.
ಕಳೆದೊಂದು ವರ್ಷದಲ್ಲಿ ವರದಿಯಾದ ಆನ್ಲೈನ್ ವಂಚನೆ ಪ್ರಕರಣಗಳಲ್ಲಿ ಶೇ. ನಾಲವತ್ತರಷ್ಟು ಪ್ರಕರಣಗಳು ‘ಹಣ ಸಿಕ್ಕಿದೆ’ ಎಂಬ ಭಾವನೆ ಹುಟ್ಟಿಸುವ ಸಂದೇಶಗಳಿಂದಲೇ ಆರಂಭವಾಗಿವೆ ಎಂಬುದು ಸ್ಪಷ್ಟವಾಗಿದೆ.
