ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಸಾಂಗರ್ಲಿ ಬಿ ಎಸ್ ಎನ್ ಎಲ್ ಟವರ್ ಗೆ 4G ಸೇವೆ ಇತ್ತೀಚಿಗೆ ನೀಡಿದ್ದು ಇರುತ್ತದೆ. ಆದರೆ ಈ ಸೇವೆಯೂ ಕೆಲವು ಪ್ರದೇಶಗಳಲ್ಲಿ ಉತ್ತಮವಾಗಿ ದೊರಕುತ್ತಿದೆ.
ಇನ್ನೂ ಕೆಲವು ಭಾಗಗಳಲ್ಲಿ ಈ ಸೇವೆಯು ಲಭ್ಯವಾಗದೇ ಹಿಂದಿನ 2G ಸೇವೆಯ ಸಂಪರ್ಕಕ್ಕೂ ತೊಂದರೆಯನ್ನುಂಟು ಮಾಡಿದೆ. ಗ್ರಾಹಕರು ತಾವು ತಿಂಗಳ,ಮೂರು ತಿಂಗಳ,ಅರ್ಧ ವಾರ್ಷಿಕ,ವಾರ್ಷಿಕ ಹೀಗೆ ತಮ್ಮ ಅನೂಕೂಲಕ್ಕೆ ತಕ್ಕಂತೆ ವೋಚರ್ ಪ್ಲಾನ್ ಬಳಸುತ್ತಿದ್ದು, ಸರಿಯಾದ ಸೇವೆ ಸಿಗದೇ ಇದ್ದರೆ ತಮಗೆ ಆರ್ಥಿಕ ನಷ್ಟ ಅನುಭವಿಸ ಬೇಕಾಗುತ್ತದೆ ಎನ್ನುವುದು ಗ್ರಾಹಕರ ಅಸಮಾಧಾನವಾಗಿದೆ.
ಮಾನ್ಯ ಉತ್ತರಕನ್ನಡ ಜಿಲ್ಲೆಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ತಮ್ಮ ಕ್ಷೇತ್ರ ವ್ಯಾಪ್ತಿಯ ಬಿ ಎಸ್ ಎನ್ ಎಲ್ ಟವರ್ ಗಳ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕೆ ಸಮರೋಪಾದಿಯಲ್ಲಿ ಕಾರ್ಯ ಕೈಗೊಳ್ಳುವಂತೆ ಸೂಚನೆ ನೀಡಿರುವುದು,ಅದಕ್ಕೆ ಅಧಿಕಾರಿ ವರ್ಗದವರು ಸ್ಪಂದಿಸುವದಾಗಿ ಭರವಸೆ ಕೊಟ್ಟಿರುವುದು ಅದು ಕಾರ್ಯಗತಗೊಂಡಾಗಲೇ ಅದಕ್ಕೊಂದು ನಿಜವಾದ ಅರ್ಥ ಬರುವುದು. ಜೋಯಿಡಾ ತಾಲೂಕಿನ ಕೆಲವು ಭಾಗಗಳಲ್ಲಿ ಈಗಾಗಲೇ ಟವರ್ ಗಳ ನಿರ್ಮಾಣ ಕಾಮಗಾರಿಯ ಮುಗಿದರು ಸಂಪರ್ಕ ನೀಡಿಲ್ಲ,ಅದೇ ರೀತಿಯಾಗಿ ಮಂಜೂರಾದ ಟವರ್ ಗಳ ಹೊಸ ನಿರ್ಮಾಣ ಕಾಮಗಾರಿಯಲ್ಲೂ ಚಾಲನೆ ದೊರಕಬೇಕಿದೆ.
ಕಾಮಗಾರಿ ಮುಗಿದ ಟವರ್ ಗಳಿಗೆ ಸಂಪರ್ಕ ಸೇವೆ ಕಲ್ಪಿಸುವ,ಹೊಸ ಟವರ್ ಗಳ ನಿರ್ಮಾಣ ಕಾರ್ಯಕ್ಕೆ ಇಲಾಖೆಯ ಅಧಿಕಾರಿಗಳು ವೇಗ ನೀಡಬೇಕಾಗಿದೆ ಎಂಬುದು ಗ್ರಾಹಕರ ಮನವಿಯಾಗಿದೆ.
