ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ ವ್ಯಾಪ್ತಿಯ ನಗರಬಾವಿಯಲ್ಲಿ ಸತತ 32 ನೇ ವರ್ಷದ ಶ್ರೀ ರಾಮಲಿಂಗ NSS ಕ್ರಿಕೆಟ್‌ ಕ್ಲಬ್ ಹಾಗೂ ಸಮಸ್ತ ಊರ ನಾಗರೀಕರ ಸಂಯುಕ್ತ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ದಿನಾಂಕ :14/01/2026 ರ ಬುಧವಾರ ಆಹ್ವಾನಿತ ತಂಡಗಳ ಗ್ರಾಮೀಣ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ನಗರಬಾವಿಯ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.

ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ದಯಾನಂದ ಮಿರಾಶಿ ಊರಿನ ಪ್ರಮುಖರು,ಜೋಯಿಡಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಚಂದ್ರಿಮಾ ಮಿರಾಶಿ, ಉಪಾಧ್ಯಕ್ಷರಾದ ಸಂತೋಷ ಮಂತೆರೋ,ಶ್ಯಾಮ್ ಪೋಕಳೆ, ಪಾಂಡುರಂಗ ಗಾವಡಾ,ಬಾಲಚಂದ್ರ ಮಿರಾಶಿ, ನಗರಬಾವಿ ಶಾಲೆಯ ಶಿಕ್ಷಕರಾದ ಎ ಆರ್ ಗೌಡ ಇನ್ನುಳಿದ ಗಣ್ಯರ, ಕ್ರೀಡಾಪ್ರೇಮಿಗಳ ಹಾಗೂ ಊರ ನಾಗರೀಕರ ಸಮ್ಮುಖದಲ್ಲಿ ನಡೆಯಿತು.

ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾ ಆಟಗಾರರಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ಸಂಘಟಕರಿಂದ ಮಧ್ಯಾಹ್ನದ ಭೋಜನದ ವ್ಯವಸ್ಥೆ ಇರುತ್ತದೆ ಎಂದು ಸಂಘಟಕರು ತಿಳಿಸಿರುತ್ತಾರೆ.