ಸುದ್ದಿ ಕನ್ನಡ ವಾರ್ತೆ

ಸಂಕ್ರಾಂತಿ ಹಬ್ಬದ ಶುಭಾಶಯಗಳು ಎಂದು ಎಲ್ಲರೂ ಎಲ್ಲರಿಗೂ ಹೇಳುವ ಕಾಲ ಇಂದು ಬಂದಿದೆ. ನೋವೆಂಬ ಎಳ್ಳು ಕಡಿಮೆ ಯಾಗಿ ನಲಿವೆಂಬ ಬೆಲ್ಲ ಹೆಚ್ಚಾಗಲಿ, ದುಃಖ ವೆಲ್ಲ ಮಾಯವಾಗಿ ಸುಖ ಸಂತೋಷದ ಸಿಹಿ ದಿನ ಎಲ್ಲರದ್ದಾಗಲಿ ಎಂಬ ಮಾತಿನಂತೆ ಇಂದಿನ ದಿನದ ವಿಶೇಷತೆ ಗಳು ಎಲ್ಲರ ಮನೆಯಲ್ಲೂ ಕಂಡು ಬರುತ್ತಿದೆ. ಸೂರ್ಯನು ಇಂದು ತನ್ನ ಪಥ ಬದಲಿಸುವಂತೆ ಜನರ ಬಾಳಲ್ಲಿ ಸುಖ ಸಂತೋಷ ಗಳು ಸದಾ ತುoಬಿರಲಿ ಎಂದು ಬಯಸುವ ದಿನ ಇಂದಿನದಾಗಿದೆ.

ಸಂಕ್ರಾಂತಿ ಹಬ್ಬ ಎಂದರೆ ರೈತರು ತಮ್ಮ ಬದುಕಿನ ಸುಗ್ಗಿ ಹಬ್ಬ ಮಾಡುವ ದಿನ, ಬಂತು ಬಂತು ಸಂಕ್ರಾಂತಿ ಎಂದು ಕುಣಿದು ಹೊಲದಲ್ಲಿ ಬೆಳೆದ ದವಸ ದಾನ್ಯ ಗಳನ್ನು ಪೂಜಿಸಿ ಮನೆ ತುಂಬಿಸಿ ಆನಂದಿಸುವ ದಿನ, ಎಳ್ಳು ಬೆಲ್ಲ ತಗೊಳ್ಳಿ ಒಳ್ಳೆ ಒಳ್ಳೆ ಮಾತಾಡಿ ಎಂದು ಬೇಡುವ ದಿನ ಈ ಸಂಕ್ರಾಂತಿ, ವರ್ಷ ಪೂರ್ತಿ ಒಳ್ಳೆಯವರಾಗಿರಲಿ ನಮ್ಮ ಅಕ್ಕ ಪಕ್ಕ ದವರು ಎಂದು ವರ್ಷ ದಲ್ಲಿ ಒಂದೇ ಒಂದು ದಿನ ಹಾರೈಸುವ ದಿನವೇ ಈ ಸಂಕ್ರಾಂತಿ ಹಬ್ಬ ಎಂದರೆ ತಪ್ಪಲ್ಲ. ವಿಶೇಷವಾಗಿ ಮಹಿಳೆಯರು ಬೆಳಿಗ್ಗೆ ಯಿಂದಲೇ ಪೂಜೆ ಪುನಸ್ಕಾರ ಅಶ್ವತ ಪೂಜೆ ಎಳ್ಳು ಬೆಲ್ಲದ ಪೂಜೆ ಸಿಹಿ ಅಡುಗೆ ಎಂದು ತುಂಬಾ ಓಡಾಡಿ ಸಂಭ್ರಮಿಸುವ ಕಾಲ, ಅಣ್ಣ ತಂಗಿ ತವರು ಮನೆ ಬಾಲ್ಯದ ನೆನಪು ಗಳನ್ನು ಮೆಲುಕು ಹಾಕುವ ಈ ಕಾಲ ವರ್ಷ ದಲ್ಲಿ ಸುಗ್ಗಿಯ ವೇಳೆಯಲ್ಲಿ ಬರುವಸಂಭ್ರಮದ ಕಾಲ, ಬೆಳದಿಂಗಳ ಊಟ ಹೊರಗಡೆ ಪರಿಸರದ ಜೊತೆಯಲ್ಲಿ ಊಟ ಗಳು ಸಂಕ್ರಾಂತಿ ಯ ಸೊಬಗನ್ನು ಹೆಚ್ಚಿಸಿವೆ,

ಧಾರ್ಮಿಕ ವಾಗಿ ಅನೇಕ ಆಚರಣೆ ಗಳೂ ಕೂಡ ಸಂಕ್ರಾಂತಿ ಹಬ್ಬದ ವಿಶೇಷತೆ ಗಳನ್ನು ತೋರಿಸುತ್ತಿವೆ ಅವುಗಳು ಜನರ ಬದುಕಿನ ಜೊತೆ ಕೊಂಡಿಯಾಗಿ ಜನಜೀವನಕ್ಕೆ ಸಹಕಾರಿ ಯಾಗಿ ಮಾರ್ಗದರ್ಶನ ನೀಡುವಂತಿರುವ ಕಾರಣ ಜನಮಾನಸದಲ್ಲಿ ಸಂಕ್ರಾಂತಿ ಹಬ್ಬದ ವಿಶೇಷತೆ ಗಳು ಹೆಚ್ಚುತ್ತಲೇ ಇದೆ. ಎಲ್ಲರೂ ಎಳ್ಳು ಬೆಲ್ಲ ತಗೊಂಡು ಸಿಹಿ ಸಿಹಿ ಮಾತನ್ನು ಜೀವನದಿಡಿ ಆಡಲಿ ಎಂಬ ಸಂಕ್ರಾಂತಿ ಹಬ್ಬದ ಶುಭಾಶಯಗಳು 💐💐