ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯಲ್ಲಿ ರಾಷ್ಟ್ರೀಯ ಯುವ ದಿನದ ನಿಮಿತ್ತ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯನ್ನು ದಿನಾಂಕ:12-01-2026 ರ ಸೋಮವಾರ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡರವರು ಮಾತನಾಡಿ ಸ್ವಾಮಿ ವಿವೇಕಾನಂದರ ಬಾಲ್ಯದ ಹೆಸರು ನರೇಂದ್ರನಾಥ ದತ್ತಾ 1863 ರಲ್ಲಿ ಕಲ್ಕತ್ತಾದಲ್ಲಿ ಜನನ.ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯತ್ವ,1893 ರ ಚಿಕಾಗೋ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಐತಿಹಾಸಿಕ ಭಾಷಣ,ಭಾರತೀಯ ಯುವ ಜನರಿಗೆ ಸ್ಪೂರ್ತಿ,ರಾಮಕೃಷ್ಣ ಮಿಷನ್ ಸ್ಥಾಪನೆ ಶಿಕ್ಷಣ ಮತ್ತು ದೇಶಭಕ್ತಿಯ ಸಂದೇಶಗಳನ್ನು ಒಳಗೊಂಡಿದೆ.ಇವರ ಜನ್ಮ ದಿನವನ್ನು ನಮ್ಮ ಭಾರತದಲ್ಲಿ ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.
ಸ್ವಾಮಿ ವಿವೇಕಾನಂದರು ಭಾರತದ ಶ್ರೇಷ್ಠ ಸಂತರಲ್ಲಿ ಒಬ್ಬರು.ಇವರು ಯುವಕರನ್ನು ಜಾಗೃತಿಗೊಳಿಸಿ, ದೇಶಭಕ್ತಿ ಮತ್ತು ಆಧ್ಯಾತ್ಮಿಕತೆಯನ್ನು ಬೆಳೆಸಲು ಶ್ರಮಿಸಿದರು.ಇವರ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಸಹ ಶಿಕ್ಷಕರಾದ ಆನಂದ ಪಿ ರವರು ಮಾತನಾಡಿ ಸ್ವಾಮಿ ವಿವೇಕಾನಂದರು ಆಧುನಿಕ ಭಾರತದ ಮಹಾನ್ ಆಧ್ಯಾತ್ಮಿಕ ನಾಯಕ ಮತ್ತು ಚಿಂತಕರು,ಅವರ ಜೀವನ ಮತ್ತು ಸಂದೇಶಗಳು ಶತಮಾನಗಳ ಕಾಲ ದೇಶದ ಯುವ ಜನರಿಗೆ ಸ್ಪೂರ್ತಿಯ ಮೂಲವಾಗಿವೆ.19 ನೇ ಶತಮಾನದ ಭಾರತವನ್ನು ಜಾಗೃತಗೊಳಿಸಿ ವಿಶ್ವಕ್ಕೆ ಭಾರತದ ಹಿರಿಮೆಯನ್ನು ಸಾರಿದ ಮಹನೀಯರು ವಿವೇಕಾನಂದರು.ಎದ್ದೇಳು,ಎಚ್ಚರಗೊಳ್ಳಿ ಗುರಿ ಸೇರುವವರಿಗೆ ನಿಲ್ಲದಿರಿ ಎಂಬ ಘೋಷಣೆಯೊಂದಿಗೆ ಯುವಕರಲ್ಲಿ ದೇಶಭಕ್ತಿ ಮತ್ತು ಸ್ವಾಭಿಮಾನ ತುಂಬಿದರು.ಅವರ ಮೇರು ವ್ಯಕ್ತಿತ್ವ ನಮಗೆ ಆದರ್ಶ ಎಂದು ಹೇಳಿದರು. ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಕುರಿತು ಭಾಷಣ,ಸಂದೇಶಗಳನ್ನು ಹೇಳಿದರು. ಸಹ ಶಿಕ್ಷಕಿಯಾದ ವಿದ್ಯಾ ಮೇಡಂ ಸ್ವಾಗತ,ನಿರೂಪಣೆ,ವಂದನಾರ್ಪಣೆ ಸಲ್ಲಿಸಿದರು.
