ಸುದ್ದಿ ಕನ್ನಡ ವಾರ್ತೆ
ಶಿರಸಿ: ಭಾನುವಾರ ನಗರದ ಎಂಇಎಸ್ ಬಯಲಿನಲ್ಲಿ ನಡೆಯಲಿರುವ ಜಲ ಕಂಟಕ ಯೋಜನೆಗಳ ವಿರುದ್ಧ ನಡೆಯಲಿರುವ ಜನ ಸಮಾವೇಶದ ಪೂರ್ವ ಸಿದ್ದತೆಗಳನ್ನು ಉಭಯ ಶ್ರೀಗಳು ಶನಿವಾರ ಸಂಜೆ ವೀಕ್ಷಣೆ ಮಾಡಿದರು.
ಸೋಂದಾ ಸ್ವರ್ಣ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಹಾಗೂ ಶ್ರೀಮನ್ನೆಲೆಮಾವು ಮಠದ ಶ್ರೀಮಾಧವಾನಂದ ಭಾರತೀ ಮಹಾಸ್ವಾಮೀಜಿಗಳು ಅಂತಿಮ ಹಂತದ ಸಿದ್ದತೆಗಳನ್ನು ವೀಕ್ಷಿಸಿ ಸಲಹೆ ಸೂಚನೆಗಳನ್ನು ನೀಡಿದರು.
ವಿಶಾಲವಾದ ಬಯಲಿನಲ್ಲಿ ರವಿವಾರ ಮಧ್ಯಾಹ್ನ ೨.೩೦ಕ್ಕೆ ಸಭೆ ಆರಂಭವಾಗಲಿದ್ದರೂ ಜನರು ೨ಕ್ಕೇ ಜನರು ಆಗಮಿಸಲು ಸ್ವರ್ಣವಲ್ಲೀ ಗುರುಗಳು ಇದೇ ವೇಳೆ ಸೂಚಿಸಿದರು.
ಎಂಟು ಸಾವಿರ ಖುರ್ಚಿಗಳು, ೧೨ ಸಾವಿರಕ್ಕೂ ಅಧಿಕ ಜನರಿಗೆ ತಿಂಡಿ ವ್ಯವಸ್ಥೆ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶಾಲವಾದ ವೇದಿಕೆಯಲ್ಲಿ ಹಲವು ಮಠಾಧೀಶರು, ಜನಪ್ರತಿನಿಧಿಗಳು, ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಇತರರು ಭಾಗವಹಿಸಲಿದ್ದಾರೆ.
ಸ್ಥಳದಲ್ಲೇ ಕುಡಿಯುವ ನೀರಿನ ವ್ಯವಸ್ಥೆ, ಕಸ ಹಾಕಲು ಅಲ್ಲಲ್ಲಿ ತೊಟ್ಟಿ ವ್ಯವಸ್ಥೆ ಕೂಡಮಾಡಲಾದೆ. ಸಾವಿರಕ್ಕೂ ಅಧಿಕ ಸ್ವಯಂ ಸೇವಕರು ವಿವಿಧ ಸಮಿತಿಗಳ ಪ್ರಮುಖರು ಸ್ವಯಂ ಕೆಲಸ ಮಾಡುತ್ತಿದ್ದು, ಜನ ಸಮಾವೇಶ ಯಶಸ್ವಿಗೆ ಕೈ ಜೋಡಿಸಿದ್ದಾರೆ. ಮಹಿಳೆಯರೂ ಪರಿಸರ ನಾಶಿ ಯೋಜನೆಯ ಬಗ್ಗೆ ಜನ ಜಾಗೃತಿಗೆ ಕೈ ಜೋಡಿಸಿದ್ದಾರೆ. ಇನ್ನು ಪಕ್ಷಾತೀತವಾಗಿ ಸ್ವಾಮೀಜಿಗಳ ಜೊತೆ ಹೆಗಲಾಗಿದ್ದು ವಿಶೇಷವಾಗಿದೆ.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ನೇತೃತ್ವದ ಈ ಜನ ಸಮಾವೇಶದ ಯಶಸ್ವಿಗೆ ಅನೇಕ ಪ್ರಮುಖರು ಕೆಲಸ ಮಾಡುತ್ತಿದ್ದಾರೆ.
ಶ್ರೀಗಳು ಜನ ಸಮಾವೇಶ ಸ್ಥಳದ ಪೂರ್ವ ಸಿದ್ಧತೆ ವೀಕ್ಷಣೆ ವೇಳೆಯಲ್ಲಿ ಪರಿಸರ ಹೋರಾಟಗಾರ ಅನಂತ ಅಶೀಸರ, ಕೇಶವ ಕೊರ್ಸೆ, ಶ್ರೀನಿವಾಸ ಹೆಬ್ಬಾರ, ಅನಂತಮೂರ್ತಿ ಹೆಗಡೆ, ಜಿ.ಎಂ.ಹೆಗಡೆ ಮುಳಖಂಡ, ಎಸ್.ಕೆ.ಭಾಗವತ್, ದೀಪಕ ದೊಡ್ಡೂರು, ಗೋಪಾಲಕೃ ಷ್ಣ ವೈದ್ಯ, ಪ್ರಮೋದ ವೈದ್ಯ, ಶ್ಯಾಂ ಭಟ್ಟ, ಕೆ.ಬಿ.ಲೋಕೇಶ ಹೆಗಡೆ, ಜಿ.ಎಂ.ಹೆಗಡೆ ನೆಲೆಮಾವು, ವಿ.ಎನ್.ಹೆಗಡೆ ಬೊಮ್ಮನಳ್ಳಿ, ಅನಂತ ಹುಳಗೋಳ ಸೇರಿದಂತೆ ಅನೇಕರಿದ್ದರು.
