ಸುದ್ದಿ ಕನ್ನಡ ವಾರ್ತೆ
ದಾಂಡೇಲಿ:ಮೊಸಳೆಗೆ ಮಾಂಸ ಎಸೆಯಬೇಡಿ ಎಂದಿದ್ದಕ್ಕೆ ದಾಂಡೇಲಿಯಲ್ಲಿ ಎಸಿಎಫ್ ಮದನ ನಾಯಕ ಅವರನ್ನು ಕೊಲೆ ಮಾಡಿದ ಆರೋಪಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಶಿಕ್ಷೆ ಪ್ರಕಟಿಸಿದೆ.
ನ್ಯಾಯಾಧೀಶ ಕಿರಣ ಕಿಣಿ ಯಲ್ಲಾಪುರ ಪೀಠದಿಂದ ಅಪರಾಧಿ ಪ್ರಶಾಂತ ಲಮಾಣಿಗೆ 10 ವರ್ಷ ಜೈಲು ಹಾಗೂ 11 ಸಾವಿರ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
2012ರಲ್ಲಿ ದಾಂಡೇಲಪ್ಪ ದೇವಸ್ಥಾನ ಸಮೀಪದಲ್ಲಿ ಕೆಲ ಪ್ರವಾಸಿಗರು ಮೊಸಳೆಗೆ ಮಾಂಸ ಎಸೆಯುವುದನ್ನು ನೋಡಿದ ಮದನ ನಾಯಕ ತಡೆದಿದ್ದರು.
ಆಗ ಪ್ರವಾಸಿಗರು ಮದನ ನಾಯಕ ಹಾಗೂ ಅವರ ಕುಟುಂಬದ ಮೇಲೆ ದಾಳಿ ಮಾಡಿದ್ದರು.
ಅವರ ಕಡೆ ಕಲ್ಲು ಬೀಸಿದಾಗ ಮದನ ನಾಯಕ ಅವರ ತಲೆಗೆ ತಾಗಿ ಅವರಿಗೆ ತಲೆ ಒಳಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿ, ಆಸ್ಪತ್ರೆ ಸೇರಿದ್ದರು. ಆರೋಪಿಗಳ ಬೆದರಿಕೆಯಿಂದ ಕಂಗಾಲಾಗಿದ್ದ ನಾಯಕರು, ಶೌಚಾಲಯದಲ್ಲಿ ಬಿದ್ದು ತನಗೆ ಪೆಟ್ಟಾಗಿದೆ ಎಂದು ಸುಳ್ಳು ಹೇಳಿಕೆ ನೀಡಿದ್ದರು. ಕೆಲ ದಿನಗಳ ನಂತರ ಮೃತಪಟ್ಟಿದ್ದರು. ಪ್ರಕರಣ ದಾಖಲಾಗಿ ಡಿವೈಎಸ್‌ಪಿ ಬಿ.ಬಿ. ಅಶೋಕಕುಮಾರ, ಹೆಡ್ ಕಾನ್ಸಟೇಬಲ್ ಮಂಜು ಶೆಟ್ಟಿ ತನಿಖೆ ನಡೆಸಿದ್ದರು. 13 ವರ್ಷಗಳ ವಿಚಾರಣೆ ನಂತರ ನ್ಯಾಯಾಧೀಶ ಕಿರಣ ಕಿಣಿ, ಪ್ರಶಾಂತ ಲಮಾಣಿಗೆ 11 ವರ್ಷ ಜೈಲು ಶಿಕ್ಷೆ ಹಾಗೂ 11 ಸಾವಿರ ರೂ ದಂಡ ಪಾವತಿಗೆ ಆದೇಶಿಸಿದರು. ಅದರೊಂದಿಗೆ ಸಂತ್ರಸ್ತ ಕುಟುಂಬಕ್ಕೂ 50 ಸಾವಿರ ರೂ ಪರಿಹಾರ ನೀಡಬೇಕು ಎಂದು ಆದೇಶಿಸಿದರು. ಈ ಕೃತ್ಯದಲ್ಲಿ ಭಾಗಿಯಾಗಿದ್ದ ಮಲ್ಲಿಕಾರ್ಜುನ ಚೌಹಾಣ ಈಗಾಗಲೇ ಮೃತಪಟ್ಟಿದ್ದಾನೆ. ಉಳಿದ ಆರೋಪಿಗಳಿಗೆ ನ್ಯಾಯಾಲಯ ತಲಾ ಒಂದು ಸಾವಿರ ರೂ ದಂಡ ವಿಧಿಸಿದೆ. ಕೊಲೆಗಾರರಿಗೆ ಶಿಕ್ಷೆ ಕೊಡಿಸಲು ಕಾರಣರಾದ ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರ ವಾದ ಕಾರಣವಾಯಿತು.
