ಸುದ್ದಿ ಕನ್ನಡ ವಾರ್ತೆ
ಜೋಯಿಡಾ -ಜೋಯಿಡಾದಲ್ಲಿ ಕರ್ನಾಟಕ ರಾಜ್ಯ ಪೋಲಿಸ್ ಇಲಾಕೆ ಹಾಗೂ ಕರ್ನಾಟಕ ರಾಜ್ಯ‌ ಪೋಲಿಸ್ ವಸತಿ ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ಇವರ ಸಹಯೋಗದಲ್ಲಿ 3.ಕೋಟಿ 76 ಲಕ್ಷ ವೆಚ್ಚದಲ್ಲಿ 12 ಪೋಲಿಸ್ ಸಿಬ್ಬಂದಿಗಳ ವಸತಿ ಗೃಹಗಳ ಕಟ್ಟಡ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮಕ್ಕೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಜೋಯಿಡಾ ಶಾಸಕ ಆರ್ ವಿ ದೇಶಪಾಂಡೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪೋಲಿಸರ ಕೇಲಸಕ್ಕೆ ಯಾವುದೇ ಸಮಯ ಇಲ್ಲ, ಭಾರತದ ಗಡಿ ಕಾಯುವವರು ಸೈನಿಕರು, ಆದರೆ ನಮ್ಮನ್ನು‌ ಕಾಯುವವರು ಪೋಲಿಸರು, ಹಗಲು ರಾತ್ರಿ ನಮ್ಮ ಸೇವೆಗೆ ಪೋಲಿಸ್ ಇಲಾಕೆ ಇದೆ, ಜೋಯಿಡಾದಲ್ಲಿ ಪೋಲಿಸ್ ಸಿಬ್ಬಂದಿಗಳಿಗೆ ವಸತಿ ಗೃಹಗಳು ಆಗುತ್ತಿರುವುದು ಸಂತಸದ ಸಂಘತಿ ಎಂದರು.

ಕೃಷಿ ಇಲಾಕೆಯಿಂದ ನೀಡಲಾಗುವ 5 ಪವರ್ ಟಿಲರ್ ನೀಡಿ ರೈತರು ತಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕು ಸರ್ಕಾರದ ಯೋಜನೆಯ ಲಾಭ ಪಡೆದುಕೊಳ್ಳಬೇಕು, ಜೋಯಿಡಾ -ದಾಂಡೇಲಿ ಭಾಗದಲ್ಲಿ ಪ್ರವಾಸೋದ್ಯಮ ಉನ್ನತ್ತಕ್ಕೆರಿದೆ ರೆಸಾರ್ಟ್ ಹೋಮ ಸ್ಟೇ ಗಳ‌ ಸಂಖ್ಯೆ ಹೆಚ್ಚಿದೆ, ನಾನು ಪ್ರವಾಸೋದ್ಯಮ ಮಂತ್ರಿ ಇದ್ದಾಗ ಬಹಳಷ್ಟು ಅನುದಾನ ಬಿಡುಗಡೆ ಮಾಡಿದ್ದೆ, ಪ್ರವಾಸೋದ್ಯಮದಿಂದ ತಾಲೂಕು ಗುರುತಿಸುವಂತಾಗಿದೆ ಎಂದರು‌.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎನ್ ಮಾತನಾಡಿ ಜೋಯಿಡಾದಲ್ಲಿ ಕೆಲಸ ಮಾಡುವ ಪೋಲಿಸರಿಗೆ ವಸತಿ ಸಮಸ್ಯೆ ಇತ್ತು, ಮುಂದೆ ಹೊಸ ವಸತಿ ಗೃಹಗಳಿಂದ ನಮ್ಮ ಸಿಬ್ಬಂದಿಗಳಿಗೆ ಅನುಕೂಲವಾಗಿದೆ ಸರ್ಕಾರಕ್ಕೆ ಧನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ ದಾಂಡೇಲಿ ಡಿ.ವೈ ಎಸ್ ಪಿ ಶಿವಾನಂದ ಮದರಖಂಡಿ, ಜೋಯಿಡಾ ಸಿಪಿಐ ಚಂದ್ರಶೇಖರ ಹರಿಹರ, ಜೋಯಿಡಾ ಪಿ.ಎಸ್ ಐ ಮಹೇಶ ಮಾಳಿ ಕೆಪಿಸಿಸಿ ಸದಸ್ಯ ಸದಾನಂದ ದಬ್ಗಾರ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ,ಮಾಜಿ ಜಿ.ಪಂ ಸದಸ್ಯ ಸಂಜಯ ಹಣಬರ,ಗ್ಯಾರಂಟಿ ಯೋಜನೆ ಅಧ್ಯಕ್ಷ ಮಂಗೇಶ ಕಾಮತ್,ಅರುಣ ದೇಸಾಯಿ ,ಮಂಜನಾಥ ಮೋಕಾಶಿ, ಸುಕನ್ಯಾ ದೇಸಾಯಿ, ವಿನಯ ದೇಸಾಯಿ, ವಿಲಾಸ ದೇಸಾಯಿ ,ಇತರರು ಇದ್ದರು.