ಸುದ್ದಿ ಕನ್ನಡ ವಾರ್ತೆ
ಜೋಯಿಡಾದ ಕುಣಬಿ ಭವನದಲ್ಲಿ ಜೋಯಿಡಾ ತಾಲೂಕು ಬ್ಲಾಕ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯನ್ನು ಜೋಯಿಡಾ ಶಾಸಕ ಆರ್.ವಿ ದೇಶಪಾಂಡೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಯುವ ಮುಖಂಡರು ಬೇಕು, ಜೋಯಿಡಾ ತಾಲೂಕಿನಲ್ಲಿ ಪಕ್ಷ ಸಂಘಟನೆ ಆಗಬೇಕು, ಇಲ್ಲಿನ‌ ಜನರಲ್ಲಿ ರಾಜಕೀಯ ಪ್ರಜ್ಞೆ ಬೇಕು, ಪಕ್ಷದ ಶಕ್ತಿ ಹೆಚ್ಚಿಸಬೇಕು, ಆರು ಮೂರು ತಿಂಗಳಿಗೊಂದು ಸಭೆ ಮಾಡಿದರೆ ಪ್ರಯೋಜನ ಇಲ್ಲ, ಪ್ರತಿ ತಿಂಗಳು ಸಭೆ ಮಾಡಿ ಎಲ್ಲಿ ಜನರಿಗೆ ಸಮಸ್ಯೆ ಇದೆ ಎಂಬುದನ್ನು ಗಮನಿಸಿ, ಮಹಿಳೆಯರಿಗೆ, ವೃದ್ದರಿಗೆ,ಬಡವರಿಗೆ ಸಹಾಯ ಮಾಡಿ, ಅಭಿವೃದ್ಧಿ ಪರವಾಗಿ ಕೆಲಸ ಮಾಡಿ, ನಮ್ಮ ಗ್ಯಾರಂಟಿ ಯೋಜನೆಯಿಂದ ವರ್ಷಕ್ಕೆ 60 ಕೋಟಿಗಿಂದ ಹೆಚ್ಚು ಹಣ ಜನರಿಗೆ ಸಿಗುತ್ತಿದೆ, ಮುಂದೆ ತಾ.ಪಂ ,ಜಿ.ಪಂ, ಗ್ರಾಮ ಪಂಚಾಯತ ಚುನಾವಣೆ ಬರಲಿದೆ ಅದಕ್ಕೆ ಸಿದ್ದತೆ ಮಾಡಿಕೊಳ್ಳಿ, ಚುನಾವಣಾ ಇರುವುದು ಗೆಲ್ಲಲು ಸೋಲಲು ಅಲ್ಲ , ಎಲ್ಲಾ ಕಾರ್ಯಕರ್ತರು ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಕೆಲಸ ಆಗಬೇಕು.

ಜೋಯಿಡಾ ತಾಲೂಕಿಗೆ ,ಲೋಕೋಪಯೋಗಿ, ಜಿ.ಪಂ, ಶಿಕ್ಷಣ ಇಲಾಕೆ,ಸೇರಿದಂತೆ ಇನ್ನೂ ಬಹಳಷ್ಟು ಇಲಾಕೆಗಳಿಗೆ ನಮ್ಮ‌ ಸರ್ಕಾರದಿಂದ ಕೋಟ್ಯಾಂತರ ರೂ ಹಣ ನೀಡಿ ಜೋಯಿಡಾ ತಾಲೂಕಿನ ಅಭಿವೃದ್ಧಿಗೆ ಶ್ರಮ ಪಟ್ಟಿದ್ದೇವೆ. ಬಿಜೆಪಿ ಪಕ್ಷ ರಾಜ್ಯದಲ್ಲಿ ಏನು ಅಭಿವೃದ್ಧಿ ಮಾಡಿದೆ ಎಂದು ತೋರಿಸಲಿ ಎಂದರು.

ಈ ಸಂದರ್ಭದಲ್ಲಿ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ, ಕೆ.ಪಿ.ಸಿಸಿ ಸದಸ್ಯ ಸದಾನಂದ ದಬ್ಗಾರ, ಮಾಜಿ.ಜಿ.ಪಂ ಸದಸ್ಯ ಸಂಜಯ ಹಣಬರ ಮಹಿಳಾ‌ ಅಧ್ಯಕ್ಷೆ ಸುಕನ್ಯಾ ದೇಸಾಯಿ, ಗ್ಯಾರಂಟಿ ಅಧ್ಯಕ್ಷ ಮಂಗೇಶ ಕಾಮತ್ , ಕಾಂಗ್ರೇಸ್‌ ಪಕ್ಷದ ಅರುಣ ದೇಸಾಯಿ, ಮಂಜುನಾಥ ಮೋಕಾಶಿ, ದತ್ತಾ ನಾಯ್ಕ,ಜುಬೇರ ಶೇಖ್, ಪ್ರಸನ್ನ ಗಾವಡಾ,ರವಿ ರೆಡ್ಕರ್, ವಿನಯ ದೇಸಾಯಿ, ಕೃಷ್ಣಾ ದೇಸಾಯಿ, ವಿಜಯ ಪಂಡಿತ್, ಶ್ರೀಧರ ದಬ್ಗಾರ, ಭವಾನಿ ಚಹ್ಹಾಣ ಇತರರು ಇದ್ದರು.