ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆಯಲ್ಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ನಂದಿಗದ್ದೆ ಶಾಲೆಯ ಸಹ್ಯಾದ್ರಿ ಇಕೋ ಕ್ಲಬ್,ಸಾರ್ವಜನಿಕ ಶಿಕ್ಷಣ ಇಲಾಖೆ ಜೋಯಿಡಾ,ಶಾಲಾ ಎಸ್ ಡಿ ಎಂ ಸಿ ಪದಾಧಿಕಾರಿಗಳು, ಪಾಲಕರ,ಪೋಷಕರ,ಶಿಕ್ಷಕರ ಸಹಯೋಗದಲ್ಲಿ ನಡೆಯಿತು. ದಾತೋಡಿಯ ಕಡಿದಾದ ಮಾರ್ಗದ ಪಯಣದಲ್ಲಿ ವಿವಿಧ ಉಪಯುಕ್ತ ಕಾರ್ಯಕ್ರಮಗಳು ನಡೆದವು. ಮಕ್ಕಳಿಗೆ ನಾಟಕ ಪ್ರದರ್ಶನ,ಚಿತ್ರಕಲೆ ಬಿಡಿಸುವುದು,ನಮ್ಮ ಸುತ್ತ ಮುತ್ತಲಿನ ಪರಿಸರದಲ್ಲಿನ ಗಿಡ,ಮರ,ಬಳ್ಳಿ,ನೀರಿನ ಮೂಲಗಳಾದ ಹಳ್ಳ- ಕೊಳ್ಳ,ಬೆಟ್ಟ ಗುಡ್ಡ ಗಳ ಮಾಹಿತಿ, ಕಾಡಿನ ಉಪಯೋಗ, ಔಷಧೀಯ ಸಸ್ಯಗಳ ಬಗ್ಗೆ,ಬೀಜದುಂಡೆ ಕಟ್ಟುವ ಕಾರ್ಯಕ್ರಮ,ಎಲ್ಲರಿಗೂ ಊಟೋಪಚಾರದ ವ್ಯವಸ್ಥೆ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಜನಾರ್ದನ ಹೆಗಡೆ,ಪ್ರಭಾರ ಮುಖ್ಯ ಶಿಕ್ಷಕರಾದ ಭುವನೇಶ್ವರ ಮೇಸ್ತಾ,ಅತಿಥಿ ಶಿಕ್ಷಕರಾದ ಎಲ್ವಿಸ್ ಕುಲಾಸ,ಸುವರ್ಣಾ ವಡಮಾಂವ ಬೆಲ್ವಿಟಾ ರೋಡ್ರಿಕ್ಸ,ಪಾಲಕರು ಮಾರ್ಗದರ್ಶನ ಮಾಡಿ ಸಹಕಾರ ನೀಡಿದರು.ಜೊತೆಯಲ್ಲಿ ಶಾಲಾ ಎಸ್ ಡಿ ಎಂ ಸಿ ಪದಾಧಿಕಾರಿಗಳು, ಪಾಲಕರು,ಪೋಷಕರು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಶಾಲೆಯ ಮುಖ್ಯೋಪಾಧ್ಯಾಯರು,ಶಿಕ್ಷಕ ವೃಂದ,ಸಿಬ್ಬಂದಿ ವರ್ಗದವರು ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸಿರುತ್ತಾರೆ.