ಸುದ್ದಿ ಕನ್ನಡ ವಾರ್ತೆ
ಹಳಿಯಾಳ,: ಸಂಭವಿಸುತ್ತಿದ್ದ ಅಪಘಾತವನ್ನು ತಪ್ಪಿಸಲು ಹೋಗಿ ಓವರ್ ಟೇಕ್ ಮಾಡಿದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಘಟನೆ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಬಾಣಸಿಗರಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಬಸ್ನಲ್ಲಿ ಪ್ರಯಾಣಿಸುತ್ತಿದ್ದ 8 ವಿದ್ಯಾರ್ಥಿನಿಯರು ಎರಡು ಮಹಿಳೆಯರು, 2 ಶಾಲಾ ಮಕ್ಕಳು ಸೇರಿ ಒಟ್ಟು 20 ಜನರಿಗೆ ಗಾಯವಾಗಿದೆ.
ಬಸ್ನಲ್ಲಿ ಸಿಲುಕಿಕೊಂಡಿದ್ದ ಜೋಗನಕೊಪ್ಪ ಗ್ರಾಮದ ಸೀಮಂತ ಕಮ್ಮಾರ್ ಎಂಬ ಹತ್ತು ವರ್ಷದ ಬಾಲಕನನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿ ಬಸ್ಸು ಮುಂಬಾಗ ಸಂಪೂರ್ಣ ನುಜುಗುಜ್ಜಾಗಿದ್ದು ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ನ ಎಂಜಿನ್ ಭಾಗ ಹಾಗೂ ಮುಂದಿನ ಸೀಟ್ ನಡುವೆ ಶಾಲಾ ಬಾಲಕನ ಕಾಲುಗಳು ಸಿಲುಕಿಕೊಂಡಿತ್ತು ಕಟರ್ ಸಹಾಯದಿಂದ ಬಸ್ ಕತ್ತರಿಸಿ ಬಾಲಕನ ರಕ್ಷಿಸಲಾಯಿತು.
ಗಾಯಾಳುಗಳನ್ನು ಹಳಿಯಾಳದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಈ ಘಟನೆಗೆ ಸಂಬಂಧಿಸಿದಂತೆ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
