ಸುದ್ದಿ ಕನ್ನಡ ವಾರ್ತೆ
ದಾಂಡೇಲಿ ಯಲ್ಲಿ ನಡೆಯುವ ಸಭೆಗೆ ಜಿಲ್ಲಾ ಕುಣುಬಿ ಸಮಾಜದ ಅಧ್ಯಕ್ಷರು ಆಗಿರುವ. ಸುಬಾಸ ಗಾವುಡಾ ಆಹ್ವಾನ ನೀಡಿದ್ದಾರೆ ದಿನಾಂಕ 9-1-2026 ರಂದು ದಾಂಡೇಲಿ ಹೊರ್ನ ಬಿಲ್ ಸಭಾ ಭವನದಲ್ಲಿ ಬೆಳಿಗ್ಗೆ:11-00 ಗಂ. ಗೆ ಅರಣ್ಯವಾಸಿಗಳ ಸಮಸ್ಯೆ ಚರ್ಚೆ ಮಾಡಲು ಮೆ// ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಶಿರಸಿ ವೃತ್ತ ರವರು ಸಭೆ ಕರೆದಿದ್ದಾರೆ.
ದಿನಾಂಕ:8-10-2025 ರಂದು ಕುಂಬಾರವಾಡಾ ಎ.ಸಿ.ಎಪ್ ಕಚೇರಿ ಎದುರು ಸ್ಥಳಿಯರು ಅರಣ್ಯವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದರು.
ಇದರ ಭಾಗವಾಗಿ ದಿನಾಂಕ:9-1-2026 ಶುಕ್ರವಾರ ದಂದು ಬೆಳಿಗ್ಗೆ 11-00 ಗಂ ಗೆ ಸ್ಥಳ: ಹಾರ್ನ್ ಬಿಲ್ ಸಭಾಭವನ ದಾಂಡೇಲಿಯಲ್ಲಿ ಅರಣ್ಯ ಸಮಸ್ಯೆಗಳು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಪರಿಹಾರೋಪಾಯ ಕಂಡುಕೊಳ್ಳಲು ತಾವು ಎಲ್ಲರು ಹಾಜರಿದ್ದು ಸಲಹೆ ಸೂಚನೆ ನೀಡುವಂತೆ ತಮ್ಮಲ್ಲಿ ಈ ಮೂಲಕ ವಿನಂತಿಸುತ್ತೇವೆ ಎಂದು ಮನವಿ ಮಾಡಿದ್ದಾರೆ.
