ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ರಾಷ್ಟ್ರೀಯ ಆರೋಗ್ಯ ಅಭಿಯಾನ,ಮಾಹಿತಿ ಶಿಕ್ಷಣ ಸಂವಹನ ಉತ್ತರಕನ್ನಡ, ಕಾರವಾರ,ಅಂಕೋಲಾದ ಅವರ್ಸಾ ತಂಡದ ಕಲಾವಿದರ ಸಂಯುಕ್ತ ಆಶ್ರಯದಲ್ಲಿ ಜನ ಜಾಗೃತಿ ಕಾರ್ಯಕ್ರಮ ನಿಮಿತ್ತ ಬೀದಿ ನಾಟಕ ಪ್ರದರ್ಶನ ಪ್ರದರ್ಶನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಬಾಮಣಗಿ ಶಾಲೆಯಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಕಿರಣಕುಮಾರ ನಾಯ್ಕ ತಂಡದ ಕಲಾವಿದರನ್ನು ಸ್ವಾಗತಿಸಿದರು. ಕ್ಷಯ,ಬೆಳವಣಿಗೆ ಬದಲಾವಣೆಗಳ ಬಗ್ಗೆ ಸಮಾಲೋಚನೆ,ಬಾಲ್ಯ ವಿವಾಹ,ಕಡ್ಡಾಯ ಶಿಕ್ಷಣ,ಲಿಂಗ ತಾರತಮ್ಯ,ಆರೋಗ್ಯ ಇಲಾಖೆಯ ಯೋಜನೆಗಳ ಕುರಿತು ಬೀದಿ ನಾಟಕದ ರೂಪದಲ್ಲಿ ಹೀಗೆ ಅನೇಕ ವಿಷಯದ ಬಗ್ಗೆ ಜನಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಕುರಿತು ಶಾಲೆಯ ಮುಖ್ಯ ಶಿಕ್ಷಕರಾದ ಕಿರಣಕುಮಾರ ನಾಯ್ಕ ಅವರು ನಮ್ಮ ಮನುಷ್ಯನ ಜೀವನದಲ್ಲಿ ಆರೋಗ್ಯ,ಶಿಕ್ಷಣ,ಸಾಮಾಜಿಕ ವಿಷಯದ ಬಗ್ಗೆ ಜ್ಞಾನ ಅತೀ ಅವಶ್ಯಕವಾಗಿದೆ, ಆರೋಗ್ಯ,ಶಿಕ್ಷಣ,ನೈರ್ಮಲ್ಯ,ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣ,ಸ್ವಚ್ಛತೆ,ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯ ವಿರುದ್ಧ ಸರ್ಕಾರ ವಿಶೇಷ ಗಮನ ನೀಡುತ್ತಿದೆ.ಬೀದಿ ನಾಟಕದ ರೂಪದಲ್ಲಿ ವಿಷಯಗಳನ್ನು ಪ್ರದರ್ಶನ ಮಾಡುವುದರಿಂದ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ.ತಂಡದ ಕಲಾವಿದರಿಂದ ಉತ್ತಮ ಕಾರ್ಯಕ್ರಮ ಮೂಡಿ ಬಂದಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವೀರಪ್ಪನವರು, ಶಾಲೆಯ ಮುಖ್ಯ ಶಿಕ್ಷಕರಾದ ಕಿರಣಕುಮಾರ ನಾಯ್ಕ,ಸಹ ಶಿಕ್ಷಕರಾದ ಬಿ.ಚವ್ಹಾಣ,ಸಹ ಶಿಕ್ಷಕಿಯರಾದ ವಂದನಾ ದೇಶಪಾಂಡೆ,ಪಿಲೋಮೀನ ನರೋನ,ಸುಮನಾ, ಆಶಾ ಕಾರ್ಯಕರ್ತೆಯರು,ಅಂಗನವಾಡಿ ಕಾರ್ಯಕರ್ತೆಯರು,ಸಹಾಯಕಿಯರು ಗ್ರಾಮಸ್ಥರು ಸಹಕರಿಸಿದರು. ಸಹ ಶಿಕ್ಷಕಿಯಾದ ಸುಮನಾ ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರನ್ನೂ ವಂದಿಸಿದರು.
