ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಶೇವಾಳಿ ಗ್ರಾಮದ ಸುಮಂಗಲಾ ದೇಸಾಯಿಯವರ ನೇತೃತ್ವದ ಶ್ರೇಯಾ ಅಭಿವೃದ್ಧಿ ಟ್ರಸ್ಟ್ ದಾಂಡೇಲಿ ತಂಡದವರ ಜಾನಪದ ಗೀತೆಯ ಹಾಡಿನ ಜೊತೆ ಇನ್ನುಳಿದ ಕಾರ್ಯಕ್ರಮಗಳು ನೆರೆದ ಪ್ರೇಕ್ಷಕರ ಮನ ಸೆಳೆದವು.

ಕ್ರೀಯಾಶೀಲ ಗೆಳೆಯರ ಬಳಗ (ರಿ)ಭಟ್ಕಳ ಇವರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಇತ್ತೀಚಿಗೆ ಐತಿಹಾಸಿಕ ಕಾರ್ಯಕ್ರಮ ನಡೆಯಿತು. ಕಲಾತಂಡದಲ್ಲಿ ಸುಮಂಗಲಾ ದೇಸಾಯಿ,ಶಿಲ್ಪಾ ಹೆಗಡೆ,ರಾಜೇಶ ಕಾನಳ್ಳಿ,ಚಿನ್ನು ಅಂಬಿಗ,ಭಾಗ್ಯಶ್ರೀ ಸಿದ್ದಿ,ಲಲಿತಾ ಸಿದ್ದಿ,ಗೀತಾ ಸಿದ್ದಿ,ಸುನಿತಾ ಸಿದ್ದಿ,ಶೈಲಾ ಸಿದ್ದಿ ಅವರನ್ನೊಳಗೊಂಡ ಕಲಾ ತಂಡದವರ ಕಲಾ ಪ್ರದರ್ಶನ ವಿಶೇಷ ಮೆರಗನ್ನು ನೀಡಿತು.