ಸುದ್ದಿ ಕನ್ನಡ ವಾರ್ತೆ

ಭಟ್ಕಳ:ತಾಲೂಕಿನಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಉತ್ತರಕನ್ನಡ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ರಾಷ್ಟ್ರೀಯ ಆರೋಗ್ಯ ಅಭಿಯಾನ,ಮಾಹಿತಿ ಶಿಕ್ಷಣ ಸಂವಹನ ಉತ್ತರಕನ್ನಡ, ಕಾರವಾರ,ಶ್ರೇಯಾ ಅಭಿವೃದ್ಧಿ ಟ್ರಸ್ಟ್ (ರಿ)ದಾಂಡೇಲಿ ಕಲಾ ತಂಡದ ಸಂಯುಕ್ತ ಆಶ್ರಯದಲ್ಲಿ ಜಾನಪದ ಕಲಾ ಪ್ರದರ್ಶನ ಭಟ್ಕಳ ತಾಲೂಕಿನ ಆಯ್ದ 15 ಗ್ರಾಮದಲ್ಲಿ ತಾಯಿ ಕಾರ್ಡ,ಸ್ನೇಹ ಕ್ಲೀನಿಕ್, ತಂಬಾಕು ಸೇವನೆ,ಕ್ಷಯ,ಎಚ್ ಐ ವಿ,ಬ್ರೂಣ ಹತ್ಯೆ ನಿಷೇಧ,ಡ್ರಗ್ಸ್,ಡೆಂಗ್ಯೂ ಮಂಗನಕಾಯಿಲೆ ಹೀಗೆ ಅನೇಕ ವಿಷಯದ ಬಗ್ಗೆ ನಾಟಕ,ಜಾನಪದ ಕಾರ್ಯಕ್ರಮದ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಡಾ.ರಾಹೆಲ್ ಸನಾ ಪಾಟೀಲ್ ತಾಲೂಕಾ ಆರೋಗ್ಯ ಅಧಿಕಾರಿಗಳು ಭಟ್ಕಳ, ರಾಮು ಎನ್,ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿಗಳು,ಆರೋಗ್ಯ ಇಲಾಖೆಯ ಸಿಬ್ಬಂದಿಗಳು,ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು,ಗ್ರಾಮಸ್ಥರು ಸಹಕರಿಸಿದರು.

ಕಲಾತಂಡದಲ್ಲಿ ಚಿನ್ನು ಅಂಬಿಗ, ರಾಜೇಶ ಕಾನಳ್ಳಿ,ಶ್ರೀಲತಾ ಭಾಗ್ವತ,ಭಾಗ್ಯಶ್ರೀ ಸಿದ್ದಿ,ಗೀತಾ ಸಿದ್ದಿ,ಸುನಿತಾ ಸಿದ್ದಿ,ಶೈಲಾ ಸಿದ್ದಿ,ಲಲಿತಾ ಸಿದ್ದಿ ಇನ್ನಿತರರು ಇದ್ದರು.