ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಹುಡಸಾ ಗ್ರಾಮದ (ಜೋಯಿಡಾ – ಹುಡಸಾ ಮಾರ್ಗ ಮಧ್ಯದಲ್ಲಿರುವ)ಶ್ರೀ ಮಾರುತಿ ದೇವರ ವಾರ್ಷಿಕೋತ್ಸವವನ್ನು ದಿನಾಂಕ:06/01/2026 ರ ಮಂಗಳವಾರರಂದು ಆಚರಿಸಲಾಗುವುದು.ಮಾರುತಿ ದೇವರ ವಾರ್ಷಿಕೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ 9-00 ಗಂಟೆಯಿಂದ ಸಾಯಂಕಾಲ 7-00 ಗಂಟೆಯವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.

ಮಧ್ಯಾಹ್ನ 12-00 ಗಂಟೆಗೆ ಶ್ರೀ ಮಾರುತಿ ದೇವರ ಮಹಾಭಿಷೇಕ ಮತ್ತು ಮಹಾಪೂಜೆ,ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ವಿತರಣೆ,ಅನ್ನ ಪ್ರಸಾದ ವಿತರಣೆ,ಫಲ ಪುಷ್ಪಗಳ ಲಿಲಾವು (ಸವಾಲ)ಕಾರ್ಯಕ್ರಮ,4:00 ಗಂಟೆಯಿಂದ ಹುಡಸಾ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಹುಡಸಾ ಊರಿನ ಯುವಕ, ಯುವತಿಯರಿಂದ ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಅನ್ನ ಸಂತರ್ಪಣೆ ಸಹಕಾರ (ಪ್ರಾಯೋಜಕರು)ಶ್ರೀ ಮಂಜುನಾಥ ಕಮಲಾಕರ ದೇಸಾಯಿ,ಕೈಟಾ,ಹುಡಸಾ. ಮಾನ್ಯರೇ, ವರ್ಷಕ್ಕೊಮ್ಮೆ ನಡೆಯುವ ಶ್ರೀ ಮಾರುತಿ ದೇವರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತಾವೆಲ್ಲರೂ ತನು-ಮನ ದಿಂದ ಕುಟುಂಬ ಸಮೇತ ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಶ್ರೀರಾಮನ ಪರಮ ಭಕ್ತನಾದ ಶ್ರೀ ಮಾರುತಿ ದೇವರ ಕೃಪೆಗೆ ಪಾತ್ರರಾಗಬೇಕೆಂದು,ಸರ್ವರಿಗೂ ಆದರದ ಸ್ವಾಗತವನ್ನು ಸಮಸ್ತ ಊರನಾಗರಿಕರು ಹುಡಸಾದವರು ವಿನಂತಿಸಿಕೊಂಡಿದ್ದಾರೆ.