ಸುದ್ದಿ ಕನ್ನಡ ವಾರ್ತೆ
. ಶಿರಸಿ:ಉತ್ತರಕನ್ನಡ ಜಿಲ್ಲೆಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಇತ್ತೀಚಿಗೆ ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿಸಿ ತಮ್ಮ ಸ್ವಕ್ಷೇತ್ರಕ್ಕೆ ಆಗಮಿಸಿದ ಸಂಸದರಾದ ಕಾಗೇರಿಯವರು ತಮ್ಮ ಸಂಸದ ಕೆಲಸಕಾರ್ಯದ ಒತ್ತಡಗಳ ನಡುವೆ ತಮ್ಮ ಕುಟುಂಬದ ಮೂಲ ಕಸುಬಾದ ಅಡಿಕೆ ತೋಟಕ್ಕೆ ಬೇಟಿ ನೀಡಿ,ಅಡಿಕೆ ಕೊಯ್ಲಿನ್ ಕೆಲಸವನ್ನು ನೋಡಿದರು.
ಅಲ್ಲದೇ ತಾವು ಕೂಡ ಕೆಲವು ಅಡಿಕೆ ಕೊನೆಯನ್ನು ದೋಟಿಯ ಮೂಲಕ ಕೊಯ್ಯುವದರ ಜೊತೆ ಅಡಿಕೆ ಕೊನೆಯನ್ನು ದೋಟಿಯ ಮೂಲಕ ಕೊಯ್ಯುವವರ ಉತ್ಸಾಹ ಹೆಚ್ಚಿಸಿದರು. ಸಂಸದರಾದ ವಿಶ್ವೇಶ್ವರ ಹೆಗಡೆಯವರು ವಿಧಾನ ಸಭಾಧ್ಯಕ್ಷರಾದ ಸಂದರ್ಭದಲ್ಲಿ ಕಾರ್ಬನ್ ಫೈಬರ್ ದೋಟಿಗೆ ಸಬ್ಸಿಡಿ ದೊರೆಯುವಂತೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಬಹುದು.
