ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನಗುಂದ ಪಂಚಾಯತದ ಶೇವಾಳಿ ಯಲ್ಲಿ ರವೀಂದ್ರ ದೇಸಾಯಿ ಕಳೆದ 10 ವರ್ಷ ಗಳಿಂದ ಅಡಿಕೆ ಸಸಿ ಗಳನ್ನು ತಯಾರಿಸುತ್ತಿದ್ದಾರೆ ತಮ್ಮ ಬಳಕೆಗೆ ಮತ್ತು ಆಸಕ್ತರಿಗೆ ಬೇಕಾದರೆ ಎಂದು ಉತ್ತಮ ಅಡಿಕೆಯನ್ನು ಆಯ್ದು ಅಡಿಕೆ ಸಸಿಗಳ ನರ್ಸರಿ ಮಾಡುತ್ತಿದ್ದರು.

ವರ್ಷ ಗಳು ಕಳೆದಂತೆ ಅನೇಕರು ತಮಗೂ ಬೇಕು ಎಂದು ಮೊದಲೇ ತಿಳಿಸುತ್ತಿರುವ ಕಾರಣ ಅವರಿಗೂ ಬೇಕು ಎಂದು ಅಡಿಕೆ ಸಸಿ ತಯಾರಿಸುತ್ತಿದ್ದಾರೆ. ಹೀಗಾಗಿ ಮನೆ ಮುಂದೆ ಪುಟ್ಟ ನರ್ಸರಿ ಎದ್ದು ಕಾಣುತ್ತಿದೆ.

ಉತ್ತರ ಕನ್ನಡ ಜಿಲ್ಲೆ ಒಂದು ಕೃಷಿ ಶಾಲೆ ಯಂತೆ ಇದೆ ಇಲ್ಲಿ ಯಾವುದೇ ಕೈಗಾರಿಕೆಗಳ ಅಬ್ಬರ ಕಡಿಮೆ ಅದರಲ್ಲೂ ಜೋಯಿಡಾ ತಾಲೂಕು ಸಾವಯವ ಕೃಷಿಗೆ ಹೆಸರುವಾಶಿ ಯಾಗಿದೆ ಕೃಷಿಕರಿಗೆ ಕಾಡುಪ್ರಾಣಿಗಳ ಹಾವಳಿಯೂ ಸಾಕಷ್ಟಿದೆ. ಪ್ರತಿಯೊಬ್ಬ ಕೃಷಿಕನೂ ಯಾವುದೇ ಕೃಷಿ ವಿಜ್ಞಾನಿಗೆ ಕಡಿಮೆ ಇಲ್ಲ ದಂತೆ ತಮ್ಮ ಕೃಷಿ ಯಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ನಿರ್ಧರಿಸಿಯೇ ಕೆಲಸ ಮಾಡುತ್ತಾರೆ. ಈ ನರ್ಸರಿ ಯಲ್ಲಿ ಕೂಡ ಅಡಿಕೆ ಆಯ್ಕೆ ಯಿಂದ ಮಣ್ಣು ಗೊಬ್ಬರ ಬೆರಕೆ ಮತ್ತು ಅಡಿಕೆ ಸಸಿ(ಅಗೆಮಡಿ) ಮಾಡುವುದರಿಂದ ಪ್ಲಾಸ್ಟಿಕ್ ಚೀಲದಲ್ಲಿಹಾಕುವ ವರೆಗಿನ ಕಾಳಜಿ ನೋಡುತ್ತಾರೆ. ಹಾಗಾಗಿ ಹೆಚ್ಚು ಹೆಚ್ಚು ಬೇಡಿಕೆಗಳನ್ನು ಜನ ಕೇಳುತ್ತಿದ್ದಾರೆ. ಬೇಡಿಕೆ ಗಳನ್ನು ನೀಡಿದವರು ಬೇಕಾದಾಗ ಸಸಿ ಒಯ್ಯಲು ಅನುಕೂಲ ವಾಗುವಂತೆ ನರ್ಸರಿಗೆ ಜೆಟ್ ಕೂಡ ಅಳವಡಿಸಿ ಸಸಿಗಳಿಗೆ ನೀರು ನಿಗದಿತ ವೇಳೆಗೆ ನೀಡುತ್ತಾರೆ. ಸಾಕಷ್ಟು ಸಸಿ ಸಂಗ್ರಹಣೆ ಮಾಡಿದ್ದು ಆಸಕ್ತರು ಒಯ್ಯಬಹುದು ಬೇರೆ ತಾಲೂಕು ಗಳಿಗಿಂತ ಕಡಿಮೆ ದರದಲ್ಲಿ ಉತ್ತಮ ಸಸಿ ಗಳನ್ನು ತಮ್ಮ ತೋಟದಲ್ಲಿಯೇ ಬೆಳೆದ ಅಡಿಕೆ ಯಾದ್ದರಿಂದ ನೀಡುತ್ತಿದ್ದೇನೆ . ನಮಗೆ ಕೂಲಿ ಗಳ ಖರ್ಚು ಬಂದರೆ ಸಾಕು ಎಂದು ರವೀಂದ್ರ ದೇಸಾಯಿ ಹೇಳುತ್ತಾರೆ ನಮ್ಮ ಬಿಡುವಿನ ವೇಳೆಯಲ್ಲಿ ನಮ್ಮ ತಂದೆ ಯವರಾದ ಸುಧಾಕರ ದೇಸಾಯಿ ಟಿ ಎಸ್ ಎಸ್ ನಿರ್ದೇಶಕ ರಾದ ವೇಳೆ ಯಲ್ಲಿ ಈ ಹವ್ಯಾಸ ವನ್ನು ಕಲಿಸಿದ್ದರು, ಈಗ ನನ್ನ ಕೆಲಸ ದಲ್ಲಿ ನನ್ನ ಧರ್ಮ ಪತ್ನಿ ಶಿಲ್ಪಾ ಕೂಡ ಸಹಾಯ ಮಾಡುತ್ತಿದ್ದಾಳೆ, ಅವಳಿಗೂ ಈ ಕೆಲಸದಲ್ಲಿ ತುಂಬಾ ಆಸಕ್ತಿ ಎನ್ನುತ್ತಾರೆ. .

. ಜೊತೆಗೆ ಮನೆಯ ಆವರಣದಲ್ಲಿ ಅಲಂಕಾರಿಕ ಹೂ ಬಳ್ಳಿ ಯಿಂದ ಆವರಣದಲ್ಲಿ ಸುಂದರತೆ ಕಂಡು ಬರುತ್ತದೆ. ಕಾಡು ಪ್ರದೇಶ ವಾದರೂ ನಾಡು ಮಾಡಿದ ರವೀಂದ್ರ ದೇಸಾಯಿ ಕೃಷಿ ಯಲ್ಲಿ ಆಸಕ್ತಿ ಯಿಂದ ಕಾಲೇಜು ಶಿಕ್ಷಣ ದ ನಂತರ ಕೃಷಿಯನ್ನೇ ಮುಂದುವರೆಸಿ ಮಾದರಿ ಕೃಷಿಕ ರಾಗಿದ್ದಾರೆ. ತೋಟದಲ್ಲಿ ಅಡಿಕೆ ಕಾಳು ಮೆಣಸು ತೆಂಗು, ಕಾಫಿ ಏಲಕ್ಕಿ ಜೊತೆಗೆ ಜೇನುಗೂಡು ಗಳನ್ನು ಇಟ್ಟು ಜೇನು ಕೃಷಿ ಗೂ ಸೈ ಎನ್ನುತ್ತಿದ್ದಾರೆ.