ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಕೊಂದರ ಶಾಲೆಯ ಮಕ್ಕಳಿಗೆ ವನಭೋಜನದ ಜೊತೆ ಪರಿಸರದ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಬುಧವಾರ ನಡೆಯಿತು.
ಸದಾ ಒಂದಿಲ್ಲೊಂದು ಉತ್ತಮ ಚಟುವಟಿಕೆಯ ಮೂಲಕ ಈಗಾಗಲೇ ತಾಲೂಕಿನ ಶೈಕ್ಷಣಿಕ ವಿಭಾಗದ ಎಲ್ಲಾ ಕ್ಷೇತ್ರದಲ್ಲಿ ಸಮುದಾಯದ, ಇಲಾಖೆಯ ಅಧಿಕಾರಿಗಳ ,ಶಿಕ್ಷಕ ವೃಂದದವರ ಮಾರ್ಗದರ್ಶನದಲ್ಲಿ ಕೊಂದರ ಶಾಲೆಯು ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ. ಶಿಕ್ಷಕ ಶಾಲೆ,ಶಾಲೆಯ ಪರಿಸರ, ಶಾಲೆಯ ಸುತ್ತಮುತ್ತಲಿನ ಪರಿಸರದಲ್ಲಿ, ಸಮಾಜದಲ್ಲಿ ಬದಲಾವಣೆಯನ್ನು ತರುವಂತಹ ಶಕ್ತಿಯರೂಪ.
ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಕೊಂದರ ಶಾಲೆಯ ಮಕ್ಕಳಿಗೆ ತಮ್ಮ ವಿದ್ಯಾರ್ಥಿ ಜೀವನದಲ್ಲೇ ಹುಟ್ಟಿನಿಂದ ತನ್ನ ಜೀವಿತಾವಧಿಯವರೆಗಿನ ಅವಶ್ಯಕತೆಗಳನ್ನು ಪೂರೈಸುವ ಪ್ರಕೃತಿಯ ಬಗ್ಗೆ ಸುತ್ತಮುತ್ತಲಿನ ಪರಿಸರದಲ್ಲಿನ ಗಿಡ,ಮರ,ಬಳ್ಳಿ ಸೇರಿದಂತೆ ನೀರಿನ ಮೂಲಗಳು, ಪ್ರಾಣಿ,ಪಕ್ಷಿಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮಕ್ಕಳ ಜೊತೆ ಪಾಲಕರು,ಪೋಷಕರು ಸೇರಿದಂತೆ ಶಾಲೆಯ ಕ್ರೀಯಾಶೀಲ ಮುಖ್ಯ ಶಿಕ್ಷಕರಾದ ಈರಣ್ಣ ಪಗಡಿಯವರು ವನಭೋಜನದ ಜೊತೆ ಪಠ್ಯೇತರ ಚಟುವಟಿಕೆಯ ಭಾಗವಾಗಿ ಪರಿಸರದ ಕುರಿತು ಪಾಠದ ಮಾಹಿತಿ ನೀಡುವ ಕಾರ್ಯಕ್ರಮದ ಜೊತೆಗೆ ಮಕ್ಕಳಿಗೆ ಹಾಗೂ ಪಾಲಕರಿಗೆ ಮನರಂಜನೆಯ ಸಲುವಾಗಿ ವಿವಿಧ ಆಟಗಳನ್ನು ಆಡಿಸಲಾಯಿತು.ಮಕ್ಕಳು,ಪಾಲಕರು,ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಪಾಲಕರು, ಪೋಷಕರು ಕಾರ್ಯಕ್ರಮದ ಯಶಸ್ಸಿಗೆ ಉತ್ತಮ ಸಹಕಾರ ನೀಡಿದರು.
