ಸುದ್ದಿ ಕನ್ನಡ ವಾರ್ತೆ
ಸಾರ್ವಜನಿಕ ಶಿಕ್ಷಣ ಇಲಾಖೆ ಯ ಸಹಯೋಗ ದಲ್ಲಿ ಆಯೋಜಿಸಲಾದ ಈ ಸಾಲಿನ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಯ ಮಾರಿಕಾಂಬಾ ಪ್ರೌಢ ಶಾಲೆಯ ಆಂಗ್ಲ ಮಾದ್ಯಮದ 9 ನೆ ತರಗತಿಯ ವಿದ್ಯಾರ್ಥಿಯಾದ ಕುಮಾರ ಚಿನ್ಮಯ ಕೆರೆಗದ್ದೆ ಈತನು ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ. ಸ್ಥಾನ ಪಡೆದು ಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾನೆ.

ಕನ್ನಡ ಭಾಷಣ ಸ್ಪರ್ಧೆಯಲ್ಲಿ ಕೂಡ ಚಿನ್ಮಯ ದ್ವಿತೀಯ ಸ್ಥಾನ ಪಡೆದುಕೊಂಡು ಭೇಷ್ ಅನಿಸಿಕೊಂಡಿದ್ದಾನೆ,ಚಿನ್ಮಯ ಉತ್ತಮ ಬಾಲ ಸಂಗೀತ ಕಲಾವಿದ ಕೂಡ ಹೌದು ಅನೇಕ ಕಾರ್ಯಕ್ರಮ ಗಳ ಆರಂಭ ದಲ್ಲಿ ಚಿನ್ಮಯನ ದೇವರ ಸ್ತುತಿಃ ಇಂದಲೇ ಕಾರ್ಯಕ್ರಮಗಳು ಆರಂಭ ವಾಗುತ್ತವೆ,ಈತನ ತಂದೆ ಕೃಷ್ಣಮೂರ್ತಿ ಕೆರೆಗದ್ದೆ ಅವರು ಶಿರಸಿ ಯ ವಿಜಯ ಕರ್ನಾಟಕ ವರದಿಗಾರರಾಗಿದ್ದು ಈ ಸಾಲಿನಲ್ಲಿ ನಡೆದ ಶಿರಸಿ ತಾಲೂಕಾ ಕಾರ್ಯ ನಿರತ ಪತ್ರ ಕರ್ತರ ಸಂಘಕ್ಕೆ ಅಧ್ಯಕ್ಷ ರಾಗಿ ಆಯ್ಕೆ ಯಾಗಿರುತ್ತಾರೆ.

ಚಿನ್ಮಯ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಮಾರಿಕಾಂಬಾ ಪ್ರೌಢ ಶಾಲೆಯ ಆಡಳಿತ ಮಂಡಳಿ ಬೋಧಕ ವೃಂದ ಮತ್ತು ಪಾಲಕರು ಆಶಿಸಿ ಹಾರೈಸಿರುತ್ತಾರೆ