ಸುದ್ದಿ ಕನ್ನಡ ವಾರ್ತೆ
ಶಿರಸಿ: ಕರ್ನಾಟಕದ ತಿರುಪತಿ ಎಂಬ ಖ್ಯಾತಿಯ ಶ್ರೀ ಕ್ಷೇತ್ರ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ನಿಮಿತ್ತ ಡಿ.೩೧ರಂದು ವಿಶೇಷ ಪೂಜೆಗಳು ಶ್ರೀದೇವರಿಗೆ ಸಮರ್ಪಣೆ ಆಗಲಿದೆ.
ಅಂದು ಬೆಳಿಗ್ಗೆ 8.30ಕ್ಕೆ ಶ್ರೀದೇವರ ಮೂಲಮೂರ್ತಿಗೆ ಶತಧಾರಾ ಕ್ಷಿರಾಭಿಷೇಕ, ಹಾಗೂ 11.30 ರಿಂದ ಶ್ರೀ ದೇವರ ಉತ್ಸವ ಮೂರ್ತಿಗೆ ಸಹಸ್ರನಾಮದಿಂದ ತುಳಸಿ ಅರ್ಚನೆಯನ್ನು ನೆರವೇರಿಸಲಾಗುತ್ತಿದೆ. ಶ್ರೀ ದೇವರ ಭಕ್ತರು ಸೇವೆಯಲ್ಲಿ ಪಾಲ್ಗೊಳ್ಳಬೇಕಾಗಿ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
