ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ದಿನಾಂಕ 23.12.2025 ರಂದು ತಾಲೂಕಾ ಆಡಳಿತ, ತಾಲೂಕು ಪಂಚಾಯತ, ಜೋಯಿಡಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಜೋಯಿಡಾ ಹಾಗೂ ಶಾಲಾ ಶಿಕ್ಷಣ ಇಲಾಖೆ ಕುಟುಂಬ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಯುಕ್ತ ಆಶ್ರಯದಲ್ಲಿ ಭೇಟಿ ಬಚಾವ್ ಭೇಟಿ ಪಡಾವೋ ಅಭಿಯಾನ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಾಜಿ ಗೋಸಾವಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀ ಸಿದ್ದಲಿಂಗಪ್ಪ ಕೋರವಾರ ಮಾತನಾಡಿ ಪೋಕ್ಸೋ ಕಾಯ್ದೆ ಹೆಣ್ಣು ಬ್ರೂಣ ಹತ್ತೆ ಮಕ್ಕಳ ರಕ್ಷಣಾ ಹಕ್ಕುಗಳು ಬಾಲ್ಯ ವಿವಾಹ ಮುಂತಾದ ವಿಷಯಗಳ ಬಗ್ಗೆ ವಿವರವಾಗಿ ತಿಳಿಸಿದರು ನಂತರ ಇನ್ನೊರ್ವ ಅತಿಥಿಗಳಾದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀ ಮಹೇಶ್ ಜಿ ಮಾತನಾಡಿ ಮಕ್ಕಳ ರಕ್ಷಣಾ ಹಕ್ಕುಗಳು ಕಾಯ್ದೆಗಳು ಕಾನೂನು ಕ್ರಮಗಳು ಇವುಗಳನ್ನು ಪ್ರತಿಯೊಂದು ಸ್ತರ ದಲ್ಲಿ ನಿರ್ವಹಿಸುವ ಇಲಾಖೆಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ವಿಶೇಷ ಉಪನ್ಯಾಸಕಿಯಾಗಿ ಆಗಮಿಸಿದ ಮೇಘನಾ ರಾಣೆ ಮಾತನಾಡಿ ಈಗಿನ ಒಂದು ಒಳ್ಳೆಯ ಸಮಾಜ ನಿರ್ಮಾಣವಾಗಲು ಹೆಣ್ಣು ಮಕ್ಕಳ ರಕ್ಷಣೆ ಜೊತೆಗೆ ಅವರ ಜವಾಬ್ದಾರಿಗಳನ್ನು ತಿಳಿಸಿಕೊಟ್ಟರು. ಅಧ್ಯಕ್ಷೀಯ ಭಾಷಣದಲ್ಲಿ ರಾಮನಗರ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಿವಾಜಿ ಗೋಸಾವಿರವರು ಮಾತನಾಡಿ ಇಂತಹ ಕಾರ್ಯಕ್ರಮಗಳು ನಮ್ಮ ರಾಮನಗರದಂತ ಗಡಿ ಭಾಗದ ಜನರಿಗೆ ಮಕ್ಕಳಿಗೆ ಜಾಗೃತಿ ಮೂಡಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತವೆ ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪೊಲೀಸ್ ಇಲಾಖೆಯ ಎಎಸ್ಐ ದೊಡ್ಮನಿರವರು ಕಾನೂನಿನ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕರಾದ ಜಿ.ಬಿ. ಲಮಾಣಿಯವರು ನಿರೂಪಿಸಿದರು. ಹಾಗೂ ಕಾರ್ಯಕ್ರಮದಲ್ಲಿ ಎಲ್ಲರನ್ನು ಮುಖ್ಯಾಧ್ಯಾಪಕರಾದ ಮಾರುತಿ ಪಾದನಕಟ್ಟಿ ಅವರು ವಂದಿಸಿದರು.