ಸುದ್ದಿ ಕನ್ನಡ ವಾರ್ತೆ

ಶಿರಸಿ: ರೈತರು ಬೆಳೆಗೆ ಕಟ್ಟಿದ ವಿಮೆ ಈ ಬಾರಿಯೂ ಕೊಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಅಗತ್ಯ‌ ಸೂಚನೆ ನೀಡಲಾಗುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಮಂಗಳವಾರ ನಗರದ ಅರಣ್ಯ ಮಹಾವಿದ್ಯಾಲಯದಲ್ಲಿ‌ ಕೃಷಿ ಇಲಾಖೆ, ಆತ್ಮ ಸಮಿತಿ, ತಾಲೂಕು‌ ಕೃಷಿಕ ಸಮಾಜ ಜಂಟಿಯಾಗಿ‌ ಹಮ್ಮಿಕೊಂಡ ರೈತ ದಿನಾಚರಣೆಗೆ ಚಾಲನೆ ನೀಡಿ, ಸಾಧಕ‌ ಕೃಷಿಕರನ್ನು ಗೌರವಿಸಿ ‌ಮಾತನಾಡಿದರು.
ಬೆಳೆ ವಿಮೆ ಸುಲಭವಾಗಿ ಬರಲು ರಾಜ್ಯ ಸರಕಾರದಿಂದ‌ ಮಳೆ ಎಷ್ಟು ಬಿದ್ದಿದೆ ಎಂದು‌ ಲೆಕ್ಕ ಹಾಕಲೇ ವಿಫಲ ಆಗಿದೆ. ಮಳೆ‌ಮಾಪನ ಕೇಂದ್ರ ಈ ಬಾರಿ ಕೂಡ ದುರಸ್ತಿ‌ ಮಾಡಿಲ್ಲ. ಆದರೂ ಬಿಡೋದಿಲ್ಲ, ರೈತರಿಗೆ ವಿಮೆ ಕೊಟ್ಟೇ ಕೊಡಿಸುತ್ತೇವೆ ಎಂದರು.
ಮಣ್ಣಿನ ಆರೋಗ್ಯವೇ ಭೂಮಿ ಆರೋಗ್ಯ, ಭೂಮಿ ಆರೋಗ್ಯವೇ ಮನುಷ್ಯನ, ಕೃಷಿಯ ಆರೋಗ್ಯವಿದೆ ಎಂದ ಅವರು, ವಿಜ್ಞಾನಿಗಳು ರೈತರಿಗೆ ಕೆಟ್ಟ ಹೆಸರು ಬರುವ ಯಾವುದೇ ಸಂಶೋಧನೆ ಮಾಡಬಾರದು. ರೈತರು ಆರೋಗ್ಯಪೂರ್ಣವಾಗಿಯೇ ಇರಬೇಕು ಎಂದರು.
ಉಪ‌ ಕೃಷಿ‌ ನಿರ್ದೇಶಕ‌ ಪಾಂಡು,
ಕೃಷಿಕ‌ ಸಮಾಜದ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ, ಆತ್ಮ‌ಸಮಿತಿ ಅಧ್ಯಕ್ಷ ದುಷ್ಯಂತರಾಜ್ ಕೊಲ್ಲೂರಿ, ಅರಣ್ಯ ಮಹಾವಿದ್ಯಾಲಯದ ಡೀನ್ ವಾಸುದೇವ ಆರ್. ಪಾಂಡು, ಕೃಷಿ ಅಧಿಕಾರಿ ಮಧುಕರ ನಾಯ್ಕ, ಡಾ. ರೂಪಾ ಪಾಟೀಲ, ಆರ್.ಡಿ.ಹೆಗಡೆ ಜಾನ್ಮನೆ, ವಿವೇಕ ಹೆಗಡೆ ಇದ್ದರು.
ಇದೇ ವೇಳೆ 2025-26ನೇ ಸಾಲಿನ ಆತ್ಮ ಯೋಜನೆಡಿ ಕೃಷಿಯಲ್ಲಿ ಸಮಗ್ರ ಬೆಳೆ ಪದ್ದತಿ ಅಳವಡಿಸಿಕೊಂಡಿರುವ ಮಹಾಬಲೇಶ್ವರ ಗೌಡ ಕಬ್ಬೆ, ತೋಟಗಾರಿಕೆ ಸಂಬಂಧಿಸಿ ಆನಂದ ಹೆಗಡೆ ಹುಳಗೋಳ, ಜೇನು ಕೃಷಿಕ ಪ್ರವೀಣ ಹೆಗಡೆ ಬಕ್ಕಳ, ಕೋಳಿ ಸಾಕಣೆದಾರ ಕನ್ನ ಬಡಗಿ ತೆಪ್ಪಾರ, ಹೈನುಗಾರ ಗಣಪತಿ ಹೆಗಡೆ ಸದಾಶಿವಳ್ಳಿ ಅವರನ್ನು ತಾಲೂಕು‌ಮಟ್ಟದ ಅತ್ಯುತ್ತಮ‌ ಕೃಷಿಕ ಪ್ರಶಸ್ತಿಯನ್ನು ಸಂಸದರು‌ ನೀಡಿ ಗೌರವಿಸಿದರು.