ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ :ಫೆಬ್ರವರಿ 11ರಿಂದ ಆರಂಭವಾಗುವ ಸುಪ್ರಸಿದ್ಧ ಯಲ್ಲಾಪುರದ ಗ್ರಾಮದೇವಿಯ ಜಾತ್ರೆಯ ವ್ಯವಸ್ಥಾಪನೆ ಹಿನ್ನೆಲೆಯಲ್ಲಿ ಸೋಮವಾರ ಸ್ಥಳೀಯ ಶಾಸಕ ಶಿವರಾಮ ಹೆಬ್ಬಾರ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಹಿರಿಯರಾದ ಪ್ರಮೋದ ಹೆಗಡೆ, ಹರಿಪ್ರಕಾಶ್ ಕೋಣೆಮನೆ, ವಿದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ರಾಜಾ ಭಟ್, ವಿಜಯಮಿರಾಶಿ, ವಿಎಸ್ ಭಟ್,ತಹಶೀಲ್ದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ತಮ್ಮ ಇಲಾಖೆಗೆ ಸಂಬಂಧಿಸಿದ ಸಿದ್ಧತೆ ವಿವರಿಸಿ ಸಾರ್ವಜನಿಕರಿಂದ ಸಲಹೆ,ಸೂಚನೆ ಪಡೆದರು.
ಮುಖ್ಯವಾಗಿ ಸಂಚಾರ ನಿಯಂತ್ರಣ,ಅಂಗಡಿ ಮುಂಗಟ್ಟು ವ್ಯವಸ್ಥೆ,ಆರೋಗ್ಯ,ನೈರ್ಮಲ್ಯ ಮತ್ತು ಅಗ್ನಿಶಾಮಕ ವ್ಯವಸ್ಥೆ ಕುರಿತು ವಿವರ ಚರ್ಚೆ ನಡೆಯಿತು. ಇಲಾಖೆಗಳ ಜೊತೆಗೆ ಸಾರ್ವಜನಿಕರ ಸಹಕಾರ,ಸಹಭಾಗಿತ್ವ ಕೋರಲಾಯಿತು.
ವಿವಿಧ ಸಂಹಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.
