ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಖಾನಗಾಂವ ಅಂಗನವಾಡಿ ಕೇಂದ್ರದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ (ICDS) ಪೋಷಣಾ ಅಭಿಯಾನ ಕಾರ್ಯಕ್ರಮವು ಖಾನಗಾಂವದಲ್ಲಿ ಶನಿವಾರ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರು,ತಾಯಂದಿರು,0 ರಿಂದ 6 ವರ್ಷದೊಳಗಿನ ಮಕ್ಕಳ ಪೌಷ್ಟಿಕ ಆಹಾರ,ಆರೋಗ್ಯ ಮತ್ತು ಸ್ವಚ್ಛತೆ ಸಮಗ್ರ ಬೆಳವಣಿಗೆಯ ಕುರಿತು ಕಾರ್ಯಕ್ರಮದಲ್ಲಿ ಅರಿವು ಮೂಡಿಸಲಾಯಿತು. ಈ ಸಂದರ್ಭ ಉಪಸ್ಥಿತರಿದ್ದ ಖಾನಗಾಂವ ಅಂಗನವಾಡಿ ಕಾರ್ಯಕರ್ತೆ ರಾಜಶ್ರೀ ಗಾವಡಾ ಹಾಗೂ ವಾಗೇಲಿ ಅಂಗನವಾಡಿ ಕಾರ್ಯಕರ್ತೆ ವಿದ್ಯಾ ಸಾವಂತ ಮಕ್ಕಳ ಆರೋಗ್ಯ ತಪಾಸಣೆಯ,ಸರಿಯಾದ ಪೋಷಣೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.ಊರಿನ ಮಹಿಳೆಯರು,ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕಾರ ನೀಡಿದರು.