ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ಅಣಶಿ ಸರಕಾರಿ ಪ್ರೌಢಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಮಕ್ಕಳ ರಕ್ಷಣಾ ನಿರ್ದೇಶನಾಲಯ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಕಾರವಾರ,ಶಿಶು ಅಭಿವೃದ್ಧಿ ಯೋಜನೆ ಜೋಯಿಡಾ,ಗ್ರಾಮ ಪಂಚಾಯತ ಹಾಗೂ ಪ್ರೌಢಶಾಲೆ ಅಣಶಿರವರ ಸಂಯುಕ್ತ ಆಶ್ರಯದಲ್ಲಿ ವಲಯ ಮಟ್ಟದ”ಬೇಟಿ ಬಚಾವೋ;ಬೇಟಿ ಪಡಾವೋ” ಕಾರ್ಯಕ್ರಮದಡಿ ಅರಿವು ಜಾಗೃತಿ ಕಾರ್ಯಾಗಾರ ದಿನಾಂಕ:19/12/2025 ರ ಶುಕ್ರವಾರ ಯಶಸ್ವಿಯಾಗಿ ಸಂಪನ್ನಗೊಂಡಿತು.
ವಲಯ ಮಟ್ಟದ ಬೇಟಿ ಬಚಾವೋ;ಬೇಟಿ ಪಡಾವೋ ಅರಿವು ಜಾಗೃತಿ ಕಾರ್ಯಾಗಾರದಲ್ಲಿ ವೇದಿಕೆಗೆ ಗಣ್ಯರನ್ನು ಆತ್ಮೀಯವಾಗಿ ಪ್ರೌಢಶಾಲೆಯ ಸಹ ಶಿಕ್ಷಕರಾದ ವಿಷ್ಣು ಪಟಗಾರರವರು ಸ್ವಾಗತಿಸಿದರು.
ನಂತರ ಪ್ರೌಢಶಾಲೆಯ ವಿದ್ಯಾರ್ಥಿನಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಸ್ ಎನ್ ಕೋರವಾರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮದ ಉದ್ದೇಶ ಮಕ್ಕಳ ಹಕ್ಕು,ಪೋಕ್ಸೋ ಕಾಯ್ದೆ,ಬಾಲ್ಯ ವಿವಾಹ ನಿಷೇಧ ಕಾಯ್ದೆ,ದತ್ತು ನಿಯಮ,ಬಾಲ ನ್ಯಾಯ ಕಾಯ್ದೆ,ಲಿಂಗ ಸಮಾನತೆ,ಶಿಕ್ಷಣದ ಮಹತ್ವದ ಬಗ್ಗೆ ಪ್ರೌಢಶಾಲೆಯ ಮಕ್ಕಳಿಗೆ ವಿವರವಾದ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಕಾರ್ಮಿಕ ನೀರಿಕ್ಷಕರು ಮಾತನಾಡಿ ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳು, ಬಾಲಕಾರ್ಮಿಕರಾಗಿ ದುಡಿಯುತ್ತಿರುವುದು ಎಲ್ಲಿಯಾದರೂ ಕಂಡು ಬಂದರೆ ಮಾಹಿತಿಯನ್ನು ತಿಳಿಸಿ ಅಂತಹ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸೋಣ ಎಂದು ಮಾಹಿತಿಯನ್ನು ನೀಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಮಹೇಶರವರು ಮಾತನಾಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆ,ಮಕ್ಕಳ ಹಕ್ಕುಗಳ ಬಗ್ಗೆ,ಮಕ್ಕಳ ಸಹಾಯವಾಣಿ 1098,ಮಕ್ಕಳ ಕಳ್ಳ ಸಾಗಾಣಿಕೆ,ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಮಕ್ಕಳ ಮೇಲೆ ಯಾವೆಲ್ಲ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಇಲಾಖೆಯ ಮಕ್ಕಳ ಆರೋಗ್ಯ ಅಧಿಕಾರಿಯವರು ಮಾತನಾಡಿ ಮಕ್ಕಳಿಗೆ ಆರೋಗ್ಯದ ಬಗ್ಗೆ,ಸ್ವಚ್ಛತೆ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಅಭಿವೃದ್ಧಿ ಮಹತ್ವಾಕಾಂಕ್ಷೆ ಯೋಜನೆಯ ತಾಲೂಕಾ ಸಂಯೋಜಕರಾದ ಶಿವಂ ನಾಯ್ಕ ಅವರು ಕಾರ್ಯಕ್ರಮದ ಕುರಿತು ಮಾತನಾಡಿ ಮಾಹಿತಿ ನೀಡಿದರು.
ಪ್ರೌಢಶಾಲೆಯ ಮುಖ್ಯ ಶಿಕ್ಷಕಿಯಾದ ಗೀತಾ ನಾಯ್ಕ ಇವರು ಶಿಕ್ಷಣ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿಯನ್ನು ನೀಡಿದರು. ರಾಜ್ಯ ಭಾಲಭವನ ಸೊಸೈಟಿ, ಬೆಂಗಳೂರು,ಜೋಯಿಡಾ ತಾಲೂಕು ಬಾಲಭವನ ಸಮಿತಿಯಿಂದ ಮಕ್ಕಳಿಗೆ ಆಯೋಜಿಸಿದ್ದ ಕ್ರೀಡೆ ಮತ್ತು ಸೃಜನಾತ್ಮಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಥಮ,ದ್ವಿತೀಯ,ತೃತೀಯ ಬಹುಮಾನದ ಪ್ರಮಾಣ ಪತ್ರಗಳನ್ನು ವೇದಿಕೆಯ ಮೇಲಿನ ಗಣ್ಯರು ವಿತರಿಸಿದರು. ವೇದಿಕೆಯಲ್ಲಿ ಅಣಶಿ ಗ್ರಾಮ ಪಂಚಾಯತ ಕಾರ್ಯದರ್ಶಿಗಳಾದ ಲಕ್ಷ್ಮಣ ಬರ್ಸೇಕರ,ಅಣಶಿ ಪ್ರೌಢಶಾಲೆಯ ವಿದ್ಯಾರ್ಥಿ ಪ್ರತಿನಿಧಿ,ಸ್ವಸಹಾಯ ಸಂಘಗಳ ಮೇಲ್ವಿಚಾರಕಿ ಸರಿತಾ ಪಾವಲೆ ಇದ್ದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಸಹ ಶಿಕ್ಷಕರಾದ ಕೃಷ್ಣಮೂರ್ತಿ, ನಾಗೇಕರ,ಪ್ರಸಾದ ನಾಯ್ಕ, ಅಂಗನವಾಡಿ ಕಾರ್ಯಕರ್ತೆ ಜಯಂತಿ ವೇಳಿಪ,ಸಹಾಯಕಿ ಸುಮನ ಮುಸ್ಕಾರ,ಆಶಾ ಕಾರ್ಯಕರ್ತೆ ದೀಪಾ ದೇಸಾಯಿ,ಗ್ರಂಥಪಾಲಕ ರಮೇಶ ಸಾವಂತ,ವಿ.ಆರ್.ಡಬ್ಲೂ ರಾಮನಾಥ ವೇಳಿಪ,ಸ್ವಸಹಾಯ ಸಂಘಗಳ ದೀಪಾ ನಾಯ್ಕ,ಶಾಲಿನಿ ನಾಯ್ಕ,ಪ್ರತಿಮಾ ವೇಳಿಪ,ಜ್ಯೋತಿ ಸಾವಂತ,ಸಂಗೀತಾ ದೇಸಾಯಿ, ಇನ್ನಿತರರು,ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಅಣಶಿ ಪ್ರೌಢಶಾಲೆಯ ಸಹ ಶಿಕ್ಷಕರಾದ ವಿಷ್ಣು ಪಟಗಾರರವರು ಕಾರ್ಯಕ್ರಮನ್ನು ಅತ್ಯುತ್ತಮವಾಗಿ ನಿರೂಪಿಸಿ,ವಂದನಾರ್ಪಣೆಯನ್ನು ಸಲ್ಲಿಸಿದರು.
