ಸುದ್ದಿ ಕನ್ನಡ ವಾರ್ತೆ
. ಭಟ್ಕಳ:ತಾಲೂಕಿನ ತೆಂಗಿನಗುಂಡಿಯ ಸರಕಾರಿ ಪ್ರೌಢಶಾಲೆಗೆ 2009 ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು LG 55 UHD TVಯನ್ನು ಪುನರ್ಮಿಲನ ತಂಡದ ಪರವಾಗಿ ಕೊಡುಗೆಯಾಗಿ ನೀಡಿದರು.
ಇತ್ತೀಚಿಗೆ ಸರಕಾರಿ ಪ್ರೌಢಶಾಲೆ ತೆಂಗಿನಗುಂಡಿಯಲ್ಲಿ ಗುರುವಂದನಾ ಹಾಗೂ 2008-09 ನೇ ಸಾಲಿನ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ ಸಮ್ಮೇಳನ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಕಲಿತ ಶಾಲೆಗೆ,ಕಲಿಸಿದ ಗುರುವನ್ನು ಗೌರವದಿಂದ ಕಾಣಬೇಕು ಎಂಬ ಮಾತಿಗೆ ಗೌರವ ಇಲ್ಲಿ ಕಾಣಬಹುದಾಗಿದೆ.ಪ್ರೌಢಶಾಲೆಯ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ಶಾಲಾ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದರು.
