ಸುದ್ದಿ ಕನ್ನಡ ವಾರ್ತೆ
ಜಿಲ್ಲೆಯ ಎಲ್ಲ 12 ತಾಲೂಕುಗಳ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯನ್ನು ಡಿಸೆಂಬರ್ ೨೭ ರಂದು ನಡೆಸಲು ರಾಜ್ಯ ಸಂಘದ ಸೂಚನೆಯ ಮೇರೆಗೆ ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಅಡಿ ತಿಳಿಸಿದ್ದಾರೆ.
ಡಿಸೆಂಬರ್ 19 ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಡಿ.23 ಮತ್ತು 24 ನಾಮಪತ್ರ ಸಲ್ಲಿಕೆ ದಿನವಾಗಿದೆ. ೨೫ರಂದು ಬೆಳಿಗ್ಗೆ ನಾಮ ಪತ್ರ ಪರಿಶೀಲನೆ ಹಾಗೂ ೨೫ರ ಮಧ್ಯಾಹ್ನ ನಾಮಪತ್ರ ವಾಪಸ್ಸು ಪಡೆಯಲು ಅವಕಾಶ ನೀಡಲಾಗಿದೆ.
ಚುನಾವಣೆ ಅಗತ್ಯ ಇದ್ದರೆ ಡಿ. 27 ರಂದು ಮತದಾನ ಪ್ರಕ್ರಿಯೆ ನಡೆಸಬೇಕು. ಫಲಿತಾಂಶವನ್ನು ಅದೇ ದಿನ ಪ್ರಕಟನೆ ಮಾಡಬೇಕು.
ಓರ್ವ ಅಧಿಕಾರಿ, ಹಿರಿಯ ಪತ್ರಕರ್ತರು ಅಥವಾ ಇನ್ನಾರಾದರೂ ಒಬ್ಬರನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಳ್ಳಬೇಕು.
ರಾಜ್ಯ/ಜಿಲ್ಲಾ ಸಂಘದ ಚುನಾವಣೆ ನಿಯಮ ಅನುಸರಿಸುವದು. ತಾಲೂಕು ಸಂಘದ ಪದಾಧಿಕಾರಿಗಳು ಪೂರ್ವ ಸಭೆ ನಡೆಸಿ ಚುನಾವಣಾ ಪ್ರಕ್ರಿಯೆ ಕುರಿತು ಚರ್ಚಿಸಬೇಕು. ಮಾಹಿತಿಗಳು ಬೇಕಿದ್ದರೆ ೯೪೪೮೩೩೧೫೨೬ ನರಸಿಂಹ ಅಡಿ ಅಧ್ಯಕ್ಷರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.
