ಸುದ್ದಿ ಕನ್ನಡ ವಾರ್ತೆ

ಜೋಯಿಡಾ ಎಲ್ಲಿಯ ಪೋಲೆಂಡ್ ಎಲ್ಲಿಯ ಅಣಶಿ …. ಯಾವುದೇ ದೇಶದ ಜನರು, ಮಹಿಳೆಯರು,ನಮ್ಮಲ್ಲಿಗೆ ಬಂದಾಗ ಗೌರವ ದಿಂದ ಬದುಕಲು ನಾವು ಸಹಕರಿಸಿದರೆ ನಮಗೂ ಗೌರವ ನಮ್ಮ ದೇಶಕ್ಕೂ ಗೌರವ ಎಂದುತಾಲೂಕಿನ ಕುಣಗಿಣಿಯ ಜೈ ಸಂತೋಷಿ ಮಾತಾ ಮತ್ತು ಕಾಳಿಕಾ ಮಾತಾ ಮಂದಿರದ ಶ್ರೀ ರಘುವೀರ ಸ್ವಾಮೀಜಿ ಹೇಳಿದ್ದಾರೆ.

ಅವರು ದೂರವಾಣಿ ಮೂಲಕ ಕರೆಮಾಡಿ ಈ ವಿಷಯ ತಿಳಿಸುತ್ತಾ,,,, ಕಳೆದ ರವಿವಾರ ಕಾರವಾರ ದ ಶಾಸಕರಾದ ಸತೀಶ ಶೈಲ ಅವರ ಮನೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಮುಗಿಸಿ ಸಂಜೆ ಜೋಯಿಡಾ ಕ್ಕೆ ಬರುವವೇಳೆ ಅಣಶಿ ತಲುಪು ವಾಗ ಸಮಯ ರಾತ್ರಿ 8 30ಘಂಟೆ . ಅಣಶಿ ಗೆ ಬರುತ್ತಿದ್ದಂತೆ ರಸ್ತೆಯಲ್ಲಿ ಕಾರುತಡೆದು ನಿಲ್ಲಿಸಿದ ಮಹಿಳೆ ಒಬ್ಬಳು ತಾನು ಗೋವಾ ಕ್ಕೆ ಬಂದವಳು ಅಣಶಿ ಕಾಡು ನೋಡಲು ಗೋವಾ ದಿಂದ ಬಂದಿದ್ದೆ,ಆದರೆ ಅಣಶಿ ರೆಸಾರ್ಟ್ ನಲ್ಲಿ ನನಗೆ ವಸತಿಗೆ ಅವಕಾಶ ನೀಡಲಿಲ್ಲ ಇದರಿಂದ ತುಂಬಾ ತೊಂದರೆ ಆಗಿದೆ ಇಲ್ಲಿ ಯಾರೂ ನನ್ನ ಜೊತೆ ಮಾತನಾಡುತ್ತಿಲ್ಲ ನನಗೆ ಭಯ ಆಗುತ್ತಿದೆ ದಯಮಾಡಿ ನನ್ನನ್ನು ಸುರಕ್ಷಿತ ಸ್ಥಳಕ್ಕೆ ಬಿಡಿ ಎಂದು ಅಳಲು ಪ್ರಾರಂಭ ಮಾಡಿದಳಂತೆ.

ರಾತ್ರಿ ಯಾದ ಕಾರಣ ಯಾವುದೇ ಬಸ್ ಇಲ್ಲದ ಕಾರಣ ಏನು ಮಾಡಲು ತೋರದೆ ರಘುವೀರ ಸ್ವಾಮಿಗಳು ತಮ್ಮ ತಾಯಿ ಇರುವ ಜೋಯಿಡಾ ಕ್ಕೆ ತಂದು ಅವಳಿಗೆ ಆದರಾತಿತ್ಯ ನೀಡಿ ಮನೆಯಲ್ಲಿ ಉಪಚರಿಸಿದರು ಮರುದಿನ ಅಂದರೆ ನಿನ್ನೆ ಪಣಸೋಲಿಯ ಆನೆ ಸಪಾರಿ ಇನ್ನಿತರ ಸ್ಥಳ ತೋರಿಸಿ ರಾಮನಗರ ದಿಂದ ಗೋವಾ ಬಸ್ ಹತ್ತಿಸಿ ನಿಟ್ಟುಸಿರು ಬಿಟ್ಟಾಗ ಏನೋ ಸಮಾಧಾನ ವಾಯಿತು ಎಂದು ಹೇಳುತ್ತಾರೆ.

ಪೋಲೆಂಡದ ಮಹಿಳೆ ಸಿಂಡ್ರಾಳ ಕಥೆ ಇದು ಪ್ರವಾಸಕ್ಕೆ ಬಂದ ಸಿಂಡ್ರಾ ಸ್ವಾಮಿ ಗಳನ್ನು ಬೀಳ್ಕೊಡುವಾಗ ರಾಮನಗರ ದಲ್ಲಿ ಕಣ್ಣೀರು ಸುರಿಸಿ ತಮ್ಮ ಊರಿಗೆ ಆಹ್ವಾನಿಸಿ ರುವುದನ್ನು ರಘುವೀರ ಸ್ವಾಮಿಗಳು ನೆನೆದು ಬಾವಪರವಾಶ ರಾಗುತ್ತಾರೆ . ಇದೇ ಅಲ್ಲವೇ ನಮ್ಮ ಸಂಸ್ಕಾರ.