ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಪೋಲೀಸ್ ಇಲಾಖೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆ ನಿಮಿತ್ತ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.

ಜೋಯಿಡಾ ಪೋಲೀಸ್ ಇಲಾಖೆಯ ಪಿ.ಎಸ್.ಐ ಮಹೇಶ ಮಾಳಿಯವರು ಪೋಲೀಸ್ ಠಾಣಾ ವ್ಯಾಪ್ತಿಯ ಶಾಲಾ,ಕಾಲೇಜು,ಬಸ್ ನಿಲ್ದಾಣಕ್ಕೆ ಬೇಟಿ ನೀಡಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪೋಕ್ಸೋ ಕಾಯ್ದೆ,ಸಂಚಾರ ನಿಯಮ,ಸೈಬರ್ ಅಪರಾಧ,112 ಸಹಾಯವಾಣಿ,ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಸಿಬ್ಬಂದಿಗಳು,ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್,ಶಿಕ್ಷಕ ವೃಂದದವರು,ಮಕ್ಕಳು,ಸಾರ್ವಜನಿಕರು ಇದ್ದರು.