ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿ ಗ್ರಾಮದ ಶ್ರೀ ಸೋಮೇಶ್ವರ ರಂಗಮಂದಿರದಲ್ಲಿ ಅಯ್ಯಪ್ಪ ಸ್ವಾಮಿಯ ಇರುಮುಡಿ ಕಟ್ಟುವ ಹಾಗೂ ಅಯ್ಯಪ್ಪ ಸ್ವಾಮಿಯ ಅನ್ನಪ್ರಸಾದ ಕಾರ್ಯಕ್ರಮ ಶೃದ್ಧಾ ಭಕ್ತಿಯಿಂದ ನಡೆಯಿತು.

ಬೆಳಿಗ್ಗೆಯಿಂದಲೇ ಶ್ರೀ ಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯಕ್ರಮ ಶ್ರೀ ಗುರುಹಿರಿಯ ಸ್ವಾಮಿಯರ ಉಪಸ್ಥಿತಿ,ಮಾರ್ಗದರ್ಶನದಲ್ಲಿ ನಡೆಯಿತು.ರಾಮನಗರದ ಶ್ರೀ ಅಯ್ಯಪ್ಪ ಸ್ವಾಮಿಯ ವೃತದಾರಿಗಳು ಪೂಜಾ ಕಾರ್ಯಕ್ರಮದಲ್ಲಿ ಸಹಕಾರ ನೀಡಿದರು.ಅವುರ್ಲಿ ಗ್ರಾಮದ ಸಂಜಯ ದೇಸಾಯಿ ಸ್ವಾಮಿ,ಪ್ರಸನ್ನ ದೇಸಾಯಿ ಸ್ವಾಮಿ,ನಿತೇಶ ಶೇಟಕರ ಸ್ವಾಮಿಗಳು ಶ್ರೀ ಅಯ್ಯಪ್ಪ ಸ್ವಾಮಿಯ ವೃತವನ್ನು ಕಟ್ಟುನಿಟ್ಟಾಗಿ ಆಚರಿಸಿ ಇಂದು ಶ್ರೀ ಅಯ್ಯಪ್ಪ ಸ್ವಾಮಿಯ ಇರುಮುಡಿ ಕಟ್ಟುವ ಹಾಗೂ ಊರಿನ ಗ್ರಾಮಸ್ಥರಿಗೆ,ಭಕ್ತರಿಗೆ ಅನ್ನಪ್ರಸಾದ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು.

ಈ ಸಂದರ್ಭದಲ್ಲಿ ಅವುರ್ಲಿ ಗ್ರಾಮದ ಹಿರಿಯರು, ಪುರುಷರು, ಮಾತೆಯರು, ಯುವಕರು,ಯುವತಿಯರು,ಮಕ್ಕಳು ಶ್ರೀ ಅಯ್ಯಪ್ಪ ಸ್ವಾಮಿಯ ದೇವರ ಮಹಾಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀ ಗುರುಸ್ವಾಮಿಯವರ ಆಶೀರ್ವಾದ ಪಡೆದು, ಪ್ರಸಾದ,ಅನ್ನಪ್ರಸಾದ ಸ್ವೀಕರಿಸಿ ಪುನೀತರಾದರು.