ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಾರ್ಟೋಳಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ,ಬೆಂಗಳೂರು,ಪ್ರೀತಿಪದ (ಡಾ.ವಿಠ್ಠಲ ಭಂಡಾರಿ ನೆನಪಿನ ಸಮಾಜವಿಜ್ಞಾನ ಅಧ್ಯಯನ ಕೇಂದ್ರ)ಆದಿವಾಸಿ ಹಕ್ಕುಗಳ ಸಮಿತಿ.ಉತ್ತರಕನ್ನಡ ಇವರ ಜಂಟಿ ಆಯೋಜನೆಯಲ್ಲಿ ಗಡಿಯಲ್ಲಿ ಜನಜೀವನ-ಸಾಹಿತ್ಯ-ಸಾಂಸ್ಕೃತಿಕ ಸಂವಾದ ಕಾರ್ಯಕ್ರಮ ಕಾರ್ಟೋಳಿ,ಕುಂಬಾರವಾಡಾ,ಜೋಯಿಡಾ,ಉತ್ತರಕನ್ನಡ ಇಂದು 15-12-2025 ರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. 4:30 ಗಂಟೆಗೆ ಕುಣಬಿ ಸೊಂಗೊ-ಕುಂಡಲ,ಕಾರ್ಟೋಳಿ, ವಾಗೇಲಿ,ಡಿಗ್ಗಿ,ಸಿಸೈ ಕಲಾವಿದರಿಂದ, ಪುಗಡಿ ಮತ್ತು ಹಾಡು ಮಹಿಳಾ ತಂಡದವರಿಂದ ಕಲಾ ಪ್ರದರ್ಶನ. ಜಿಲ್ಲೆಯ ಪ್ರಧಾನ ಬುಡಕಟ್ಟುಗಳ ಬದುಕು,ಗಡಿ ಪ್ರದೇಶದ ಪರಿಸ್ಥಿತಿ,ಕಲೆ,ಅಭಿವೃದ್ಧಿಯ ಸಂಬಂಧಗಳು,ಕುಣಬಿ ಬದುಕು ಮತ್ತು ಕಲೆ,ಸಮುದಾಯದ ಅಭಿವೃದ್ಧಿಯ ಸಾಧ್ಯತೆಗಳು ಎಂಬ ವಿಷಯ ಮಂಡನೆ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ಮಾಹಿತಿ ನೀಡಿ ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ.