ಸುದ್ದಿ ಕನ್ನಡ ವಾರ್ತೆ

ಚಳಿಗಾಲದಲ್ಲಿ ನಾನ್ ಸ್ಟಾಪ್ ಕೆಮ್ಮು ಜೀವ ಹಿಂಡುವುದಲ್ಲದೆ ಕೆಮ್ಮಿನ ರಭಸಕ್ಕೆ ಮೂತ್ರದ ವಿಸರ್ಜನೆ ಆಗುವಷ್ಟು ಸಿರಿಯಸ್ ಆಗುತ್ತದೆ. ಕೆಮ್ಮಿದರೆ ಎದೆಯಲ್ಲಿ ನೋವು ಬರುವುದು ಕಫ ಬರುವುದಿಲ್ಲ .

ಇದಕ್ಕಾಗಿ ಸುಲಭದ ಮನೆಮದ್ದು: ಸಾದಾರಣ ಗಾತ್ರದ ಬಿಳಿಯ ಈರುಳ್ಳಿಯನ್ನು ರೊಟ್ಟಿ ಸುಡುವ ಹೆಂಚು ಅಥವಾ ಚೂಪಾದ ಸಲಾಕೆ ಸಹಾಯದಿಂದ ಸುಡಬೇಕು. ಮೇಲಿನ ಸಿಪ್ಪೆ ಸುಟ್ಟು ಕರಕಲಾಗಿ ಒಳಗಿನ ಭಾಗದಲ್ಲಿ ಚನ್ನಾಗಿ ಬೆಂದಿದೆ ಎಂದು ಖಾತರಿ ಮಾಡಿಕೊಳ್ಳಿ.ಮೇಲಿನ ಎರಡು ಪದರವನ್ನು ತೆಗೆದು ಬಿಸಾಕಿ.

ಒಳಭಾಗದ ಬೆಂದ ತಿರುಳನ್ನು ಆಲೆಮನೆ ಬೆಲ್ಲದೊಂದಿಗೆ ಸ್ವಲ್ಪ ಸ್ವಲ್ಪ ಜಗಿದು ತಿನ್ನಿ.ದಿನಕ್ಕೆ ಎರಡು ಮೂರು ಈರುಳ್ಳಿಯನ್ನು ಖಾಲಿ ಮಾಡಿ. ಒಂದು ಅಥವಾ ಹೆಚ್ಚೆಂದರೆ ಎರಡು ದಿನಗಳಲ್ಲಿ ಕೆಮ್ಮು ಗುಣವಾಗಿರುತ್ತದೆ.

🖌️ಸುಮನಾ ಮಳಲಗದ್ದೆ.ಪಾರಂಪರಿಕ ವೈದ್ಯ.9980182883.