ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ತಾಲೂಕಿನಲ್ಲಿ ವಾಹನ ಚಾಲನೆ ಮಾಡುವವರಿಗೆ ಕಾಳಜಿ ಎಸ್ಟಿರಬೇಕು ಎಂಬ ಬಗ್ಗೆ ತಾಲೂಕಾ ಕೇಂದ್ರದ ಬಸ್ ನಿಲ್ದಾಣದ ಬಳಿ ಜೋಯಿಡಾ ಪಿಎಸ್ಐ ಮಹೇಶ ಮಾಳಿ ಅವರು ಜನತೆಗೆ ಜಾಗೃತಿ ಮೂಡಿಸಿದರು.

ಶನಿವಾರ ಬೆಳಿಗ್ಗೆ ಯಿಂದ ಪಿಎಸ್ಐ ಅವರು ಜನತೆಗೆ ಮಾಹಿತಿ ನೀಡುತ್ತಿದ್ದರು. ನೀವು ಮನೆಯಿಂದ ಹೊರಗಡೆ ಹೋಗುವಾಗ ಹೆಲ್ಮೆಟ್ ಹಾಕಿಯೇ ಹೋಗಬೇಕು ನಿಮ್ಮನ್ನು ನಂಬಿ ಮನೆ ಯಲ್ಲಿ ಜನರಿರುತ್ತಾರೆ ನಿಮಗೆ ಏನಾದರೂ ತೊಂದರೆ ಆದರೆ ಅವರಿಗೂ ತೊಂದರೆ ಕಟ್ಟಿಟ್ಟ ಬುತ್ತಿ ಹಾಗಾಗಿ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಕೊಳ್ಳಿ, ಕೈ ಕಾಲು ಗಳಿಗೆ ಏನಾದರೂ ತೊಂದರೆ ಆದರೆ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಸಾಧ್ಯ ವಿದೆ ಆದರೆ ತಲೆಯೇ ಒಡೆದರೆ ಮದ್ದಿಲ್ಲ ಹಾಗಾಗಿ ನೀವು ರಕ್ಷಣೆ ಗಾಗಿ ಹೆಲ್ಮೆಟ್ ಹಾಕಿ ಕೊಂಡು ರಕ್ಷಣೆ ಮಾಡಿಕೊಳ್ಳಿ, ನಿಮ್ಮ ಜೊತೆ ಬರುವವರಿಗೂ ಹೆಲ್ಮೆಟ್ ಹಾಕಿಯೇ ಕರೆದು ಕೊಂಡು ಬನ್ನಿ ಇತರ ವಾಹನ ಚಾಲಕರು ಶೀಟ್ ಬೆಲ್ಟ್ ಹಾಕಿ ಕೊಳ್ಳಿ ಎಲ್ಲ ಪೇಪರ್ಸ್ ಗಳನ್ನು ನವಿಕರಿಸಿ ಇಟ್ಟುಕೊಳ್ಳಿ, ಚಾಲನಾ ನಿಯಮಕ್ಕೆ ಗೌರವ ಕೊಟ್ಟು ಚಾಲನೆ ಮಾಡಿ ಎಂದರು ಹಿಂದಿನ ತಿಂಗಳು ಕೂಡ ವಾಹನ ಚಾಲಕರಿಗೆ ಹೀಗೆ ಮಾಹಿತಿ ನೀಡಿ ಎಚ್ಚರಿಕೆ ನೀಡಿದ್ದರು .

ಇನ್ನು ಮುಂದೆ ಹೆಲ್ಮೆಟ್ ಹಾಕದೇ ವಾಹನ ಚಲಾವಣೆ ಮಾಡಿದರೆ ಪೆಟ್ರೋಲ್ ಕೊಡಬೇಡಿ ಎಂದು ಹೇಳುತ್ತೇವೆ, ಆಗಲಾದರೂ ಜನರಿಗೆ ಜೀವದ ಬಗ್ಗೆ ಎಚ್ಚರಿಕೆ ಬರಬಹುದು ಎಂದರು ಈ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸ್ ಸಿಬ್ಬಂದಿಗಳು ವಾಹನ ಮಾಲೀಕರು ಇದ್ದರು