ಸುದ್ದಿ ಕನ್ನಡ ವಾರ್ತೆ
ಜೊಯಿಡಾ :ಹಳ್ಳಿಗಳಲ್ಲಿ ಶಾಲೆಗಳು ನಡೆಯ ಬೇಕಾದರೆ ಮೂಲ ಸೌಕರ್ಯಗಳು, ಕಲಿಕೆಗೆ ಬೇಕಾದ ಸಾಮಗ್ರಿಗಳು ಉಪಕರಣ ಗಳು ಇದ್ದರೆ ಸುಲಭವಾಗಿ ಕಲಿಸಲು ಶಿಕ್ಷಕರಿಗೂ ಅನುಕೂಲ ವಾಗುತ್ತದೆ, ಇದನ್ನು ತಾಲೂಕಿನ ಶಾಲೆಗಳ ಆಡಳಿತ ಮಂಡಳಿಗಳು ಚನ್ನಾಗಿ ತಿಳಿದುಕೊಡಿವೆ, ವ್ಯವಸ್ಥೆ ಗಳನ್ನುಕೂಡ ಚನ್ನಾಗಿ ಮಾಡಿಕೊಳ್ಳುತ್ತಿವೆ , ತಾವು ಕಲಿತು ಉತ್ತಮ ಹುದ್ದೆಯಲ್ಲಿರುವ ಕೆಲವರು ತಮ್ಮ ಹುಟ್ಟೂರಿಗೆ ಬಂದಾಗತಾವು ಕಲಿತ ಪ್ರಾಥಮಿಕ ಶಾಲೆಯ ಜೀವನ ನೆನಪಾಗುವುದು ಸಹಜ, ಆಗ ತಾವು ಕಲಿಯುವಾಗ ಇರುವ ತೊಂದರೆ ಗಳು ಈಗ ಶಾಲೆ ಯಲ್ಲಿ ಕಲಿಯುವ ಮಕ್ಕಳಿಗೆ ಬರಬಾರದು ಎಂದು ಶಾಲೆಗೆ ಏನು ಬೇಕು ಎಂದು ತಿಳಿದು ಸಹಾಯ ಮಾಡುವ ವಿಶಾಲ ಮನಸ್ಸಿನ ನವರು ಇದ್ದಾರಲ್ಲ ಎನ್ನುವುದು ಸಂತೋಷ ದ ವಿಷಯ.

ಸುಧಾಮ ವಿಜಯ ದೇಸಾಯಿ ಯರಮುಖ ಕನ್ನಡ ಶಾಲೆಯ ಹಳೆಯ ವಿದ್ಯಾರ್ಥಿ, ಪ್ರಾಥಮಿಕ ಶಿಕ್ಷಣವನ್ನುಯರಮುಖ ಶಾಲೆಯಲ್ಲಿ ಕಲಿತ ಇವರು. ಈಗ ವಿದೇಶಿ ಸಂಸ್ಥೆ ಯಲ್ಲಿ ಉದ್ಯೋಗಿ, ಹುಟ್ಟೂರಿಗೆ ಬಂದಾಗ ಶಾಲೆಯನ್ನು ನೆನಪಿಸಿ ಭೇಟಿನೀಡುವದು ವಿಚಾರ ವಿನಿಮಯ ಮಾಡುವ ಸುಧಾಮ ದೇಸಾಯಿ ಶಾಲೆಗೆ ಸಹಾಯ ಮಾಡಬೇಕು ಎಂದು ಅಕ್ಕ ಪಕ್ಕ ದವರಲ್ಲಿ ಹೇಳುತ್ತಲೇ ಇರುತ್ತಿದ್ದರು. ಅದೇರೀತಿ ಈ ತಿಂಗಳು ಊರಿಗೆ ಬಂದಾಗ ಯರಮುಖ ಶಾಲೆಗೆ ಸುಮಾರು ರೂಪಾಯಿ ಹತ್ತು ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಸಲಕರಣೆ ಮತ್ತು ವಿದ್ಯಾರ್ಥಿ ಗಳಿಗೆ ನೋಟ್ ಬುಕ ಗಳನ್ನು ವಿತರಿಸಿ ಸಮಾಧಾನ ಪಟ್ಟರು, ಈ ಸರಳ ಸಮಾರಂಭ ದಲ್ಲಿ ಅಧ್ಯಕ್ಷೆ ಸುಕನ್ಯಾ ದೇಸಾಯಿ, ಶಿಕ್ಷಕಿಯರಾದ ಪ್ರಭಾ ಆಳ್ಕೆ ಮತ್ತು ಪಾರ್ವತಿ ನಾಯ್ಕ್ ಮಾತನಾಡಿ ಸುಧಾಮ ದೇಸಾಯಿ ಅವರ ಸರಳ ತನ ಅವರ ಗುಣವನ್ನು ಮೆಚ್ಚಿದರು ಸುಧಾಮ ದೇಸಾಯಿ ಅವರಾಗಿಯೇ ಶಾಲೆಗೆ ಬಂದು ಇಲ್ಲಿ ಬೇಕಾಗಿರುವುದೇನು ಎಂದು ವಿಚಾರಿಸಿ ನಮಗೆಸಹಕಾರನೀಡಿದ್ದು ಅವರ ದೊಡ್ಡ ಗುಣ ಎಂದು ಅವರನ್ನು ಶಾಲು ಹೊದಿಸಿ ಗೌರವಿಸಿದರು.
ಇದು ಗ್ರಾಮಸ್ಥರಿಗೆ ಸಂತಸ ತಂದಿದೆ ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷೆ ಸುಕನ್ಯಾ ದೇಸಾಯಿ ಮುಖ್ಯ ಶಿಕ್ಷಕಿ ಪ್ರಭಾ ಆಳ್ಕೆ ಶಿಕ್ಷಕಿ ಪಾರ್ವತಿ ನಾಯ್ಕ್ ಮಮತಾ. ಭಾಗ್ವತ್ ರಾಮಚಂದ್ರ ಹೆಗಡೆ ಮತ್ತು ಪೂಜಾ ಸುಧಾಮ ದೇಸಾಯಿ ಗ್ರಾಮಸ್ಥರು ಉಪಸ್ಥಿತರಿದ್ದರು .
