ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಉಳವಿಯಲ್ಲಿ ಜಿಲ್ಲಾ ಪಂಚಾಯತ ಉತ್ತರಕನ್ನಡ, ತಾಲೂಕು ಪಂಚಾಯತ ಜೋಯಿಡಾ, ಸಾರ್ವಜನಿಕ ಶಿಕ್ಷಣ ಇಲಾಖೆ ಜೋಯಿಡಾ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಶೈಕ್ಷಣಿಕ ಜಿಲ್ಲೆ ಶಿರಸಿ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಸಮೂಹ ಸಂಪನ್ಮೂಲ ಕೇಂದ್ರ ನಂದಿಗದ್ದೆ, ಶ್ರೀಚನ್ನಬಸವೇಶ್ವರ ಪ್ರೌಢಶಾಲೆ ಉಳವಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಜೋಯಿಡಾ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2025-26 ರ ಕಾರ್ಯಕ್ರಮದಲ್ಲಿ

ನಂದಿಗದ್ದೆ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ವಿದ್ಯಾರ್ಥಿಗಳಾದ ಹಿರಿಯರ ವಿಭಾಗದ ಕುಮಾರ ಪವನ ಬಸವರಾಜ ಗಾಣದಾಳ, ಆಶುಭಾಷಣ (ಪ್ರಥಮ). ಕುಮಾರಿ ಪ್ರಾರ್ಥನಾ ಸುಬ್ರಾಯ ದಾನಗೇರಿ, ಭಕ್ತಿಗೀತೆ,(ಪ್ರಥಮ). ಕುಮಾರಿ ಹೇಮಾವತಿ ಮಂಜುನಾಥ ಸಾವರಕರ,ಚಿತ್ರಕಲೆ,(ಪ್ರಥಮ). ಸ್ಥಾನ ಪಡೆದು ಜಿಲ್ಲಾ ಮಟ್ಟದ ಪ್ರತಿಭಾ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಅದೇ ರೀತಿಯಾಗಿ ಕುಮಾರಿ ಸನ್ನಿಧಿ ಶ್ರೀಕೃಷ್ಣ ಕುಟ್ಟಿಕರ,ಕನ್ನಡ ಕಂಠಪಾಠ,(ದ್ವಿತೀಯ ). ಕುಮಾರಿ ಭುವಿ ಭಾಸ್ಕರ ಭಟ್ಟ,ಧಾರ್ಮಿಕ ಪಠಣ (ದ್ವಿತೀಯ),ಆಂಗ್ಲ ಕಂಠಪಾಠ (ತೃತೀಯ)ಸ್ಥಾನ ಪಡೆದಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಶೀರ್ ಅಹ್ಮದ ಶೇಖ್,ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಯಶವಂತ ನಾಯ್ಕ,ಪದಾಧಿಕಾರಿಗಳು,ಸಂಪನ್ಮೂಲ ವ್ಯಕ್ತಿಗಳಾದ ಭಾಸ್ಕರ ಗಾಂವ್ಕರ ಶಾಲೆಯ ಮುಖ್ಯ ಶಿಕ್ಷಕರು,ಸಹ ಶಿಕ್ಷಕ ವೃಂದದವರು,ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ಪಾಲಕರು,ಪೋಷಕರು,ಗಣ್ಯರು, ಶಿಕ್ಷಣ ಪ್ರೇಮಿಗಳು ಅಭಿನಂದನೆ ಸಲ್ಲಿಸಿದ್ದಾರೆ.
