ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕಾಳಿ ಪ್ರವಾಸೋದ್ಯಮ ಸಂಸ್ಥೆ,ತಾಲೂಕು ಕುಣಬಿ ಸಮಾಜ ಅಭಿವೃದ್ಧಿ ಸಂಘ,ಕಾಳಿ ರೈತ ಉತ್ಪಾದಕ ಕಂಪನಿ,ಕುಂಬಾರವಾಡಾ ಇವುಗಳ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 17 2025 ರ ಬುಧವಾರ ಮುಂಜಾನೆ 10 ರಿಂದ ಸಂಜೆ 4 ರ ವರೆಗೆ ಕುಣಬಿ ಸಮುದಾಯ ಭವನ ಜೋಯಿಡಾ,ಉತ್ತರಕನ್ನಡ ದಲ್ಲಿ 12 ನೇ ಗೆಡ್ಡೆ ಗೆಣಸು ಮೇಳ ನಡೆಯಲಿದೆ.
ಸುಪ್ರಸಿದ್ಧ ಕುಣಬಿ ಮುಡ್ಲಿ ಸೇರಿದಂತೆ ಜೋಯಿಡಾದ ಬುಡಕಟ್ಟು ಜನಾಂಗದವರು ಬಳಸುವ ಗೆಡ್ಡೆ ಗೆಣಸುಗಳ ಪ್ರದರ್ಶನ,ಸ್ಪರ್ಧೆ,ಮಾರಾಟ ಹಾಗೂ ಆಹಾರ ಮೇಳ ನಡೆಯಲಿದೆ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಗೆಡ್ಡೆ ಗೆಣಸು ಮೇಳವನ್ನು ಯಶಸ್ವಿ ಮಾಡಿಕೊಡಬೇಕೆಂದು ಸಂಘಟಕರು ವಿನಂತಿಸಿಕೊಂಡಿದ್ದಾರೆ.
