ಸುದ್ದಿ ಕನ್ನಡ ವಾರ್ತೆ
. ನವದೆಹಲಿ:ಭಾರತ ಸರ್ಕಾರದ ಜವಳಿ ಸಚಿವಾಲಯವು ಡಿಸೆಂಬರ್ 9, 2025 ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ, ನಮ್ಮ ಬೆಳಗಾವಿ ಜಿಲ್ಲೆಯ ಖಾನಾಪುರದ ಹೆಮ್ಮೆಯಾದ ಪುಂಡಲೀಕ ಕುಂಬಾರ ಅವರಿಗೆ ಟೆರಾಕೋಟಾ ಮತ್ತು ಕುಂಬಾರಿಕೆ ಕರಕುಶಲ ಕ್ಷೇತ್ರದಲ್ಲಿನ ಅನನ್ಯ ಕೊಡುಗೆಗಾಗಿ ಮಾನ್ಯ ಕೇಂದ್ರ ಜವಳಿ ಸಚಿವರಾದ ಗಿರಿರಾಜ್ ಸಿಂಗ್ ಅವರು ವಿಶೇಷ ಪ್ರಶಂಸಾ ಪತ್ರದೊಂದಿಗೆ ಅವರನ್ನು ಸನ್ಮಾನಿಸಿದ್ದರು.
ಇದು ನಮಗೆಲ್ಲ ಅತ್ಯಂತ ಹೆಮ್ಮೆಯ ಕ್ಷಣ.
ಇದರ ಹಿನ್ನೆಲೆಯಲ್ಲಿ, ನಮ್ಮ ಕ್ಷೇತ್ರದ ಹೆಮ್ಮೆಯ ಪ್ರತಿನಿಧಿಯಾದ ಪುಂಡಲೀಕ ಕುಂಬಾರ ಅವರನ್ನು ಮಾನ್ಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ನವದೆಹಲಿಯಲ್ಲಿರುವ ಅವರ ಕಛೇರಿಯಲ್ಲಿ ವೈಯಕ್ತಿಕವಾಗಿ ಭೇಟಿ ಮಾಡಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಪುಂಡಲೀಕ ಕುಂಬಾರ ಅವರ ಈ ಪರಿಶ್ರಮ ಮತ್ತು ಕಲಾ ನೈಪುಣ್ಯವು ನಮ್ಮ ಇಡೀ ಪ್ರದೇಶಕ್ಕೆ ಗೌರವ ತಂದಿದೆ ಮತ್ತು ನಮ್ಮ ಸ್ಥಳೀಯ ಕುಶಲಕರ್ಮಿಗಳ ಸಮುದಾಯಕ್ಕೆ ಒಂದು ದೊಡ್ಡ ಸ್ಫೂರ್ತಿಯಾಗಿದೆ. ಅವರ ಕಲಾತ್ಮಕ ಕೊಡುಗೆಯು ಮುಂದಿನ ತಲೆಮಾರುಗಳಿಗೂ ಆದರ್ಶಪ್ರಾಯ,
ಇಂತಹ ಪ್ರತಿಭೆಗಳು ನಮ್ಮ ಕ್ಷೇತ್ರದಲ್ಲಿದ್ದು, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ನಿಜಕ್ಕೂ ಅಭಿನಂದನೀಯ ಎಂದು ತಿಳಿಸಿದರು.
