ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದಲ್ಲಿ ಸಾರ್ವಜನಿಕ ರೆಲ್ಲರ ಸಹಕಾರ ದಿಂದ ಅಯ್ಯುಪ್ಪ ಸ್ವಾಮಿ ಯವರ ಸೇವಾ ಕಾರ್ಯ ಕಳೆದ 31ವರ್ಷ ಗಳಿಂದ ನಡೆಯುತ್ತಾ ಬಂದಿದೆ ಅದರಂತೆ ಈ ವರ್ಷವೂ ಕೂಡ ಸಂಭ್ರಮ ಭಕ್ತಿಯಿಂದ ಶ್ರೀ ಸ್ವಾಮಿಯ ಸೇವೆಗಳು ನಡೆಯುತ್ತಿವೆ.
ಬರುವ ಜನೆವರಿ 7ರಂದು ಮಧ್ಯಾಹ್ನ 12 30 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ ಮತ್ತು 1 ಘಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ನಡೆಯಲಿದೆ ಅದರ ನಿಮಿತ್ತ ಮಹಾ ಪ್ರಸಾದ ಅನ್ನ ಸಂತರ್ಪಣೆ ಕೂಡಾ ನಡೆಲಿದೆ.
ಆದ್ದರಿಂದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ಅನ್ನ ಪ್ರಸಾದ ಸ್ವೀಕರಿಸಲು ಕೇಳಿಕೊಳ್ಳುತ್ತೇವೆ. ಅನ್ನ ಪ್ರಸಾದ ವನ್ನುಶ್ರೀ ಸಿದ್ದೇಶ್ವರ ದೇವಸ್ಥಾನ ದ ಆವಾರದಲ್ಲಿ ನೀಡಲಾಗುವದು
ಜನೆವರಿ 3ರಂದು ತಾಲೂಕಿನ ಕೇಂದ್ರ ಸ್ಥಳದಲ್ಲಿ ಮಕರ ಜ್ಯೋತಿಯ ಮೆರವಣಿಗೆ ನಡೆಯಲಿದ್ದು. ಭಕ್ತರು ತಮ್ಮ ಮನೆಗಳ ಮುಂದೆ ರಂಗವಲ್ಲಿ ಹಾಕಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬಹುದು.
ಜನೆವರಿ 9ರಂದು ಅಯ್ಯಪ್ಪ ಸ್ವಾಮಿ ವ್ರತಾದಾರಿ ಗಳಿಗೆ ಇರುಮುಡಿ ಕಟ್ಟಲಾಗುವದು ಭಕ್ತರು ಕಾರ್ಯಕ್ರಮ ದಲ್ಲಿ ಭಾಗವಹಿಸಿ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗ ಬೇಕು ಎಂದು ಗುರುಸ್ವಾಮಿ ಸಿದ್ಫು ಜೋಕೆರಿ ತಿಳಿಸಿರುತ್ತಾರೆ
