ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ತಾಲೂಕು ಪಂಚಾಯತ ಜೋಯಿಡಾ,ಕೃಷಿ ಇಲಾಖೆ ಜೋಯಿಡಾ ಇವುಗಳ ಸಂಯುಕ್ತ ಆಶ್ರಯದಲ್ಲಿ 2025-26 ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತೆ ಮತ್ತು ಪೌಷ್ಟಿಕ ಅಭಿಯಾನ ಯೋಜನೆಯಡಿ ಭತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಕೊಂದರ ಭತ್ತದ ಗದ್ದೆಯಲ್ಲಿ ಇತ್ತೀಚಿಗೆ ನಡೆಯಿತು.

ಈ ಸಂದರ್ಭದಲ್ಲಿ ಜೋಯಿಡಾ ಕೃಷಿ ಇಲಾಖೆಯ ಅಧಿಕಾರಿಯಾದ ಮದನ್ ರವರು ಕಾರ್ಯಕ್ರಮದ ಕುರಿತು ವಿವರವಾದ ಮಾಹಿತಿ ನೀಡಿದರು.ಕುಂಬಾರವಾಡಾ ಹೋಬಳಿ ಅಧಿಕಾರಿಗಳು,ಇನ್ನಿತರ ಅಧಿಕಾರಿ ವರ್ಗದವರು ಮಾಹಿತಿ ನೀಡಿದರು.ಸ್ವಸಹಾಯ ಸಂಘಗಳ ಸದಸ್ಯರು,ಕೃಷಿ ಸಖಿ,ಪಶು ಸಖಿ,ರೈತ ಬಾಂಧವರು ಕಾರ್ಯಕ್ರಮದ ಮಾಹಿತಿ ಪಡೆದುಕೊಂಡರು.