ಸುದ್ದಿ ಕನ್ನಡ ವಾರ್ತೆ

ಕರ್ನಾಟಕ ಪ್ರಾಂತ ರೈತ ಸಂಘದಿಂದ ಪಾದಯಾತ್ರೆಯ ಮೂಲಕ ಶಾಸಕರ ಕಚೇರಿ ಹಳಿಯಾಳ ಕ್ಕೆ ಹೋಗುವ ಮೂಲಕ ಜೊಯಿಡಾ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿಲಾಗುತ್ತದೆ ಎಂದು ತಹಶಿಲ್ದಾರ ಜೊಯಿಡಾ ರವರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.

ರೈತ ಸಂಘ ಅನೇಕ ವರ್ಷಗಳಿಂದ ವಿವಿಧ ರೀತಿಯಲ್ಲಿ ಹೋರಾಟ ಮಾಡುವ ಮೂಲಕ ಬೇಡಿಕೆ ಈಡೇರಿಸಲು ಆಗ್ರಹಿಸಲಾಗುತ್ತಿದೆ ಆದರೂ ಪ್ರಯೋಜನವಾಗಲಿಲ್ಲ . ಹೀಗಾಗಿ ಡಿಸೆಂಬರ್ 16 ರಂದು ಬೆಳಗ್ಗೆ 11.00 ಗಂಟೆಗೆ ಜೋಯಿಡಾ ತಹಶೀಲ್ದಾರ ಕಚೇರಿಯಿಂದ ಪಾದಯಾತ್ರೆ ಮುಖಾಂತರ ಹೋಗುವ ಮೂಲಕ ಡಿಸೆಂಬರ್. 17 ರಂದು ಹಳಿಯಾಳದಲ್ಲಿರುವ ಶಾಸಕ ಆರ್ ವಿ ದೇಶಪಾಂಡೆ ರವರ ಕಛೇರಿ ಎದುರು ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

ಪ್ರಮುಖ ಬೇಡಿಕೆಗಳು :-
ಕಿರವತ್ತಿ, ಕಾರಟೋಳಿ, ಡಿಗ್ಗಿ ಗೋವಾಗಡಿ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆ ಮತ್ತು ಸೇತುವೆ ನಿರ್ಮಾಣ, ಡಿಗ್ಗಿ ಮುಖ್ಯ ರಸ್ತೆಯಿಂದ ವಾಗೇಲಿ ರಸ್ತೆ ಮರು ಡಾಂಬರೀಕರಣ, ಕಿರವತ್ತಿ, ತೆರಾಳಿ, ಸಿಸ್ಟೆ, ದುಧಮಳಾ ರಸ್ತೆ ಡಾಂಬರಿಕರಣ ಮತ್ತು ಸೇತುವೆ ನಿರ್ಮಾಣ, ಡಿಗ್ಗಿ ಮುಖ್ಯ ರಸ್ತೆಯಿಂದ ಕಸಂಬಾ, ಅಂತರೆ, ತಳಿ, ನಮಸಿ, ಬುಳಬುಳಿ, ಧಾಮಣಕುಣಂಗ, ಮಾರ್ಲಿ, ಫಾತರಶೇತ ಮತ್ತು ಗೋಟಾರ ರಸ್ತೆ ಸುಧಾರಣೆ,
ಜೋಯಿಡಾದಿಂದ ಕುಂಡಲ ವಸತಿ ಬಸ್, .ಬಿ.ಎಸ್.ಎನ್.ಎಲ್ ಟವರ ಗ್ರಾಮಿಣ ಭಾಗದಲ್ಲಿ ಅಳವಡಿಸುವುದು.ನ್ಯಾಯ ಬೆಲೆ ಅಂಗಡಿ , ಕಾರ್ಟೋಳಿ,ಜೋಯಿಡಾ ದಿಂದ ಗಾಂಗೋಡಾ ರಸ್ತೆ ಡಾಂಬರೀಕರಣ,ವನ್ಯಜೀವಿ ವಿಭಾಗದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆ ತಪ್ಪಿಸುವುದು.ಜೊಯಿಡಾ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೆಜ್ ಘೋಷಣೆ, ವಿದ್ಯುತ್ ಇಲ್ಲದ ಮನೆಗಳಿಗೆ ವಿದ್ಯುತ್ ಸಂರ್ಪಕ ನೀಡುವುದು, ಕುಣಬಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು.ಅವೈಜ್ಞಾನಿಕ ಸ್ವ-ಇಚ್ಛಾ ಪುರ್ನವಸತಿ ಪ್ಯಾಕೇಜ ರದ್ದು ಪಡಿಸುವುದು.ಇತ್ಯಾದಿ ಬೇಡಿಕೆಗಳಿವೆ ಮನವಿ ನೀಡುವ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಪ್ರೇಮಾನಂದ ಕೆ. ವೇಳಿಪ ರಾಜೇಶ ಗಾವಡಾ, ಜೈರಾಮ ಸಾವಂತ, ವಿಜೆತಾ ಸಾವಂತ ಇತರರು ಇದ್ದರು.