ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂದ ಅರಣ್ಯ ವಲಯದ ಶೇವಾಳಿ ಯ ಕಾರೇಮನೆಯಲ್ಲಿ ಹತ್ತಕ್ಕೂ ಹೆಚ್ಚು ಜೇನು ಪಟ್ಟಿಗೆಗಳನ್ನು ಕಳೆದ ಮೂರು ದಿನಗಳಲ್ಲಿ ಕರಡಿ ತಿಂದು ನಾಶ ಪಡಿಸಿದ ಘಟನೆ ಆತಂಕ ತಂದಿದೆ .

ಶ್ರೀನಾಥ ದೇಸಾಯಿ ತಮ್ಮ ಮನೆ ಪಕ್ಕದಲ್ಲಿರುವ ಅಡಿಕೆ ತೋಟದ ಪಕ್ಕದಲ್ಲಿಸುಮಾರುಇಪ್ಪತ್ತಕ್ಕೂ ಹೆಚ್ಚು ಜೇನು ಪೆಟ್ಟಿಗೆ ಗಳನ್ನು ಇಟ್ಟು ಜೇನು ಸಾಕಾಣಿಕೆ ಮಾಡುತ್ತಿದ್ದರು ಇದರಿಂದ ಅಡಿಕೆ ಇಳುವರಿ ಕೂಡ ಉತ್ತಮವಾದ ರೀತಿಯಲ್ಲಿ ಕಂಡು ಬರುತ್ತಿತ್ತು ಆದರೆ ಕಳೆದ ಮೂರು ದಿನ ಗಳಿಂದ ಬ್ರಹತ್ ಕರಡಿ ಯೊಂದು ಯಾರ ಹೆದರಿಕೆ ಇಲ್ಲದೇ ತೋಟದಲ್ಲಿ ಓಡಾಡುತ್ತಿದೆ. ಮನೆಯವರೆಲ್ಲ ಹೆದರಿ ಕೊಂಡು ಪಟಾಕ್ಸಿಗಳನ್ನು ಸಿಡಿಸಿದ್ದಾರೆ .

ಆದರೂ ಹೆದರಿಕೆ ಇಲ್ಲದೇ ಕರಡಿ ಪ್ರತಿದಿನ ರಾತ್ರಿ ಮನೆ ಅಂಗಳಕ್ಕೆ ಬಂದು ಜೇನು ಪಟ್ಟಿಗೆ ಗಳನ್ನು ಕೆಡವಿ ಜೇನು ತಿಂದು ಹೋಗುತ್ತಿದೆ ತಂದು ಬಿಟ್ಟಿರುವ ಕರಡಿ ಇದಾಗಿರ ಬಹುದೇ . ಎಂಬ ಶಂಕೆ ಗ್ರಾಮಸ್ಥರನ್ನು ಕಾಡುತ್ತಿದೆ ಕಾಡಿನಲ್ಲಿರುವ ಕರಡಿ ಗಳು ಈ ರೀತಿಯಲ್ಲಿ ಬರುವುದು ಕಡಿಮೆ ಮತ್ತು ಪಟಾಕ್ಸಿ ಸಿಡಿಸಿದರೆ ತಿಂಗಳುಗಳ ಕಾಲ ಮತ್ತೆ ಬರುವುದು ಕಡಿಮೆ, ಆದರೆ ಈ ಕರಡಿಗೆ ಪಟಾಕ್ಸಿಯ ಹೆದರಿಕೆಯೇ ಇಲ್ಲ, ಪಟಾಕ್ಸಿ ಸಿಡಿದರೂ ಜೇನುಗೂಡು ತಿನ್ನುವುದನ್ನು ಬಿಡುವುದಿಲ್ಲ ಹೀಗಾದರೆ ಹೇಗೆ ಮನೆ ಜನ ಹೊರಗೆ ಓಡಾಡುವದು ಹೊರಗಿನ ಜನರು ಬರುವಾಗ ಕರಡಿ ಕಾಡಿಸಿದರೆ ಗತಿಯೇನು ಎಂಬ ಚಿಂತೆ ಶ್ರೀನಾಥ್ ದೇಸಾಯಿ ಅವರನ್ನು ಕಾಡುತ್ತಿದೆ, ಈ ರಸ್ತೆ ಯಲ್ಲಿ ತೋಟಕ್ಕೆ ಮನೆಗೆ ಓದಾಡುವ ಎಲ್ಲರಿಗೂ ಕರಡಿ ಚಿಂತೆ ಕಾಡುತ್ತಿದೆ, ಅರಣ್ಯ ಇಲಾಖೆಯವರು ಪರಿಸರ ಪ್ರವಾಸೋದ್ಯಮ ಎಂದು ಕಾಡನ್ನೆಲ್ಲ ನಾಡು ಮಾಡಲು ಹೊರಟಿದ್ದಾರೆ,

ಹಾಗಾಗಿ ಕಾಡು ಪ್ರಾಣಿಗಳು ನಾಡಿಗೆ ಬರುವುದು ಸಹಜ ಎಂಬ ಸ್ಥಿತಿಯಲ್ಲಿ ಗ್ರಾಮೀಣ ಜನರಿದ್ದಾರೆ ಇದೇ ಪಂಚಾಯತದ ಗುಂದ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ಆನೆ ಯೊಂದು ಗ್ರಾಮಸ್ಥ ರನ್ನು ಕಾಡುತ್ತಿದ್ದು ರಾತ್ರಿ ಪಹರೆಯಲ್ಲಿ ಜನರು ತೋಟ ಕಾಯುತ್ತಿದ್ದಾರೆ. ಇದೇರೀತಿ ಆದರೆ ಯಾವ ಬೆಳೆಯನ್ನೂ ಬೆಳೆಯಲು ರೈತರು ಹಿಂದೇಟು ಹಾಕಬಹುದು.