ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ತಾಲೂಕಿನ ರಾಮನಗರ BGVS ಪದವಿಪೂರ್ವ ಕಾಲೇಜಿನ ವತಿಯಿಂದ ಏಳು ದಿನಗಳ ವಿಶೇಷ NSS ಶಿಬಿರವನ್ನು ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಚಾಪಾಳಿ ಗ್ರಾಮದಲ್ಲಿ ಯಶಸ್ವಿಯಾಗಿ ಇತ್ತೀಚಿಗೆ ನಡೆಯಿತು.
ಈ ಸಂದರ್ಭದಲ್ಲಿ ಶಿಬಿರದ ಕಾರ್ಯ ಚಟುವಟಿಕೆಯ ಭಾಗವಾಗಿ ಚಾಪಾಳಿ ಗ್ರಾಮದ ಶಾಲಾ ಪರಿಸರ, ದೇವಸ್ಥಾನ, ಪ್ರಮುಖ ಸ್ಥಳಗಳಲ್ಲಿ ಪದವಿಪೂರ್ವ ಕಾಲೇಜಿನ NSS ಶಿಬಿರದ ಶಿಬಿರಾರ್ಥಿಗಳಿಂದ ಸ್ವಚ್ಛತೆಯ ಕಾರ್ಯ ನಡೆಯಿತು. ಶಿಬಿರದಲ್ಲಿ ವಿದ್ಯಾರ್ಥಿಗಳಲ್ಲಿ ಶಿಸ್ತು,ಸಂಯಮ,ನಾಯಕತ್ವ ಗುಣ,ಎಲ್ಲಕ್ಕಿಂತ ಮುಖ್ಯವಾಗಿ ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ಸುತ್ತಮುತ್ತಲಿನ ಪರಿಸರದ ಅರಿವು,ಜಾಗ್ರತಿಯ ಕಾರ್ಯಚಟುವಟಿಕೆ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಯಿತು.
