ಸುದ್ದಿ ಕನ್ನಡ ವಾರ್ತೆ

ತಾಲೂಕಿನ ಮೇಸ್ತ ಬಿರೋಡಾ ದಲ್ಲಿ ಸಂಭ್ರಮ ಸಡಗರ ಗಳ ನಡುವೆ ಭಕ್ತಿಯಿಂದ ಶ್ರೀ ದತ್ತ ಜಯಂತಿ ಯನ್ನು ಆಚರಿಸಲಾಯಿತು ಪ್ರತಿ ವರ್ಷ ದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆದವು,

ಬೆಳಿಗ್ಗೆ ಯಿಂದಲೇ ನೂರಾರು ಭಕ್ತರು ಮೇಸ್ತ ಬಿರೋಡಾಕ್ಕೆ ತೆರಳಿ ಗುರುದೇವ ದತ್ತರ ಧರ್ಶನ ಪೂಜೆ ನಡೆಸಿ ಕೃತಾರ್ಥ ರಾದರು ಜೋಯಿಡಾ ತಾಲೂಕಾ ಕೇಂದ್ರದಿಂದ ಕೇವಲ 4 ಕಿಲೋಮೀಟರ ದೂರದಲ್ಲಿದೆ ಗುರುದೇವ ದತ್ತ ಮಂದಿರ, ತಾಲೂಕಿನ ವಿವಿದೆಡೆಯಿಂದ ಬಂದ ಭಕ್ತರು ಹಣ್ಣು ಕಾಯಿ ಸಮರ್ಪಿಸಿ ಗುರುದೇವ ದತ್ತರ ತೊಟ್ಟಿಲು ಪೂಜೆ ಮತ್ತು ತೊಟ್ಟಿಲು ತೂಗುವ ಹಾಡಿಗೆ ಭಕ್ತಿಪರವಶ ರಾದರು ಜೈ ಗುರುದೇವ ದತ್ತ ಎಂದು ಭಕ್ತಿ ಯಿಂದ ದ್ಯಾನಮಾಡಿದರು. ಸೇರಿದ ಜನತೆ ನಿರಂತರವಾಗಿ ಪೂಜೆ ಭಜನೆ ಮಾಡುತ್ತಾ ಭಕ್ತಿಯಲ್ಲಿ ತೆಲಿಹೋದರು. ಮಹಾಮಂಗಳಾರತಿ ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ಸಂಜೆ ಸಂಗೀತ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿದೆ. ಆಚಾರಿ ಕುಟುಂಬದವರು ಎಲ್ಲ ವ್ಯವಸ್ಥೆ ಗಳನ್ನು ಜನರ ಸಹಕಾರದಿಂದ ನಡೆಸುತ್ತಿದ್ದಾರೆ.